ಬೆಂಗಳೂರು: 33 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 9:30 ಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋವನ್ನು ತಲುಪಿದೆ. ಈ ರೈಲು ಜೂ. 11 ರಂದು ಮಧ್ಯಾಹ್ನ 03:20 ಕ್ಕೆ ಗುಜರಾತ್‌ನ ಕಾನಾಲಸ್‌ನಿಂದ ಲೋಡ್ ಮಾಡಿಕೊಂಡು ಪ್ರಯಾಣ ಬೆಳೆಸಿತ್ತು.
ಈ ರೈಲು 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 99.21 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ. ಇಲ್ಲಿಯವರೆಗೆ ಕರ್ನಾಟಕವು 3,781.42 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ರೈಲು ಮೂಲಕ ಸ್ವೀಕರಿಸಿದೆ.
ಭಾರತೀಯ ರೈಲ್ವೆ ಇದುವರೆಗೆ 421 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಓಡಿಸಿದೆ ಮತ್ತು 1,734 ಟ್ಯಾಂಕರ್‌ಗಳಲ್ಲಿ 30,000 ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ ಮತ್ತು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರವನ್ನು ನೀಡಿದೆ.