ಕೆ.ಆರ್.ಪುರ: ಬೆಂಗಳೂರಿನ ಕೆ.ಆರ್.ಪುರದ ಹೊರಮಾವು ಬಳಿಯ ಕ್ರಿಶ್ಚಿಯನ್ ನರ್ಸಿಂಗ್ ಕಾಲೇಜಿನಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನ ಹೊರಮಾವು ಹೊಸ ರಾಜಣ್ಣ ಲೇಔಟ್ನಲ್ಲಿರುವ ಕ್ರಿಶ್ಚಿಯನ್ ಕಾಲೇಜಿಗೆ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ಪಶ್ಚಿಮ ಬಂಗಾಳದಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಈ ವಿದ್ಯಾರ್ಥಿಗಳಿಂದಲೇ ಇತರರಿಗೂ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ.
ಸೋಂಕಿತ ವಿದ್ಯಾರ್ಥಿಗಳು ಹೆಚ್ಎಎಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಕಾಲೇಜು ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಘೋಷಣೆ ಮಾಡಲಾಗಿದೆ. ಕೇರಳದಿಂದ ಬೆಂಗಳೂರಿಗೆ ಬರುವವರಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿರುವುದು ಶಾಲಾ - ಕಾಲೇಜು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ವಿದ್ಯಾರ್ಥಿಗಳು ವಾಸವಾಗಿರುವ ಹಾಸ್ಟೆಲ್‍ಗಳು, ಕಾಲೇಜು ಸೀಲ್ಡೌನ್ ಮಾಡಲಾಗಿದೆ, ಕಾಲೇಜು ಒಂದು ವಾರ ಕಂಟೇನ್ಮೆಂಟ್ ಜೋನ್ ಆಗಲಿದೆ.
ಇದನ್ನೂ ಓದಿ: ಮುಗಿಯದ ದಾಖಲಾತಿ ಪ್ರಕ್ರಿಯೆ.. ಪ್ರಥಮ ಪಿಯು ಕಿರು ಪರೀಕ್ಷೆ ಕ್ಯಾನ್ಸಲ್