ಬೆಳ್ತಂಗಡಿ: ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ''ಶ್ರಮಿಕ ನೆರವು'' ವತಿಯಿಂದ ಸುಮಾರು 30,000 ದಿನಸಿ ಕಿಟ್ ವಿತರಿಸಲು ಶಾಸಕ ಹರೀಶ್ ಪೂಂಜಾ ತಯಾರಿ ನಡೆಸಿದ್ದಾರೆ.
ಉಜಿರೆಯ ಉದ್ಯಮಿಗಳಾದ ಲಕ್ಷ್ಮೀ ಗ್ರೂಪ್ಸ್ ಮೋಹನ್ ಕುಮಾರ್ ಹಾಗೂ ಸಂದ್ಯಾ ಟ್ರೇಡರ್ಸ್ ರಾಜೇಶ್ ಪೈ ಅವರ ಉಸ್ತುವಾರಿಯಲ್ಲಿ 'ಬದುಕು ಕಟ್ಟೋಣ ಬನ್ನಿ' ಎಂಬ ತಂಡದಿಂದ ಕಿಟ್ ತಯಾರಿ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆ.
ಏ. 23ರಿಂದ ಉಜಿರೆಯ ರತ್ನವರ್ಮ ಕ್ರಿಡಾಂಗಣದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕಿಟ್ ವಿತರಣೆಗೆ ಚಾಲನೆ ನೀಡಲಿದ್ದಾರೆ. ತಾಲೂಕಿನ 241 ಬೂತ್ಗೆ ತಲಾ 100 ಕಿಟ್ಗಳನ್ನು ನೀಡಲಾಗುತ್ತಿದ್ದು, ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗುವುದು.
ಕೊರೊನಾ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಇಬ್ಬರು ಸ್ವಯಂ ಸೇವಕರು ಬಂದು ವಾಹನದಲ್ಲಿ ತೆಗೆದುಕೊಂಡು ಹೋಗಿ ತಮ್ಮ ಬೂತ್ನಲ್ಲಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಬೂತ್ಗೆ ಸಂಬಂಧಪಟ್ಟ ಸ್ವಯಂ ಸೇವಕರು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಪಟ್ಟಿಯ ಪ್ರಕಾರ ಗೊಂದಲ ಆಗದ ರೀತಿಯಲ್ಲಿ ಮುಂಜಾಗ್ರತೆ ವಹಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಕಿಟ್ ವಿತರಣೆಯಾಗಲಿವೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.