ETV Bharat / state

ಸರ್ಕಾರ ನೀಡುವ ಮನೆಗಳಲ್ಲಿ ಶೇ.3 ರಷ್ಟು ದಿವ್ಯಾಂಗರಿಗೆ ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸರ್ಕಾರ ನೀಡುವ ಮನೆಗಳಲ್ಲಿ ಶೇ.3ರಷ್ಟು ಮನೆಗಳನ್ನು ದಿವ್ಯಾಂಗರಿಗಾಗಿ ಮೀಸಲಿಡಲು ನಿಯಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

3-percent-of-govt-houses-are-reserved-for-disabled-says-cm-basavaraj-bommai
ಸರ್ಕಾರ ನೀಡುವ ಮನೆಗಳಲ್ಲಿ ಶೇ.3 ರಷ್ಟು ದಿವ್ಯಾಂಗರಿಗೆ ಮೀಸಲು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Dec 3, 2022, 4:29 PM IST

ಬೆಂಗಳೂರು : ಬಡ ವರ್ಗದವರಿಗೆ ಸರ್ಕಾರ ನೀಡುವ ಮನೆಗಳಲ್ಲಿ ಶೇ.3 ರಷ್ಟು ದಿವ್ಯಾಂಗರಿಗೆ ಮೀಸಲಿಡಲು ನಿಯಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ-2022 ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರ ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿ 5 ಲಕ್ಷ ರೂ.ಗಳ ವರೆಗೂ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಆಸ್ಪತ್ರೆಗೆ ದಾಖಲಾದರೂ, ಸರ್ಕಾರವೇ ವೆಚ್ಚವನ್ನು ಭರಿಸುವಂತಹ ವಿಮಾ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ದಿವ್ಯಾಂಗರಿಗೆ ಒದಗಿಸುವ ವಾಹನಕ್ಕೆ ಅನುದಾನ ಹೆಚ್ಚಳ : ಅಲ್ಲದೇ ದಿವ್ಯಾಂಗರಿಗಾಗಿ ಯಾಂತ್ರೀಕೃತ ತ್ರಿಚಕ್ರ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಈವರೆಗೂ ಮೀಸಲಿಡುತ್ತಿದ್ದ 15 ಕೋಟಿಗಳಿಗೆ 10 ಕೋಟಿ ರೂ.ಗಳನ್ನು ಸೇರಿಸಿ 25 ಕೋಟಿ ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಮುಂದಿನ ಮಾರ್ಚ್ ಅಂತ್ಯದ ವೇಳೆಗೆ 2 ಸಾವಿರ ಸೈಕಲ್‌ಗಳನ್ನು ವಿತರಣೆ ಮಾಡಲಾಗುವುದು. ಜತೆಗೆ, ಈ ವರ್ಗದವರಿಗಾಗಿ ಶೆಲ್ಟರ್ಡ್​​ ವರ್ಕ್​ ಷಾಪ್‌ಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ಯೋಜನಗೆಗಳನ್ನು ಘೋಷಣೆ ಮಾಡುವುದಾಗಿ ಅವರು ಹೇಳಿದರು.

ದಿವ್ಯಾಂಗ ಮಕ್ಕಳು ದೇವರ ಮಕ್ಕಳಾಗಿದ್ದು, ಅವರ ಯೋಗಕ್ಷೇಮ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಜತೆಗೆ, ಸರ್ಕಾರ ಈ ವರ್ಗದೊಂದಿಗಿದ್ದು, ವಿದ್ಯಾಭ್ಯಾಸವನ್ನು ಮುಂದುವರೆಸಬೇಕು ಎಂದು ಅವರು ಹಾರೈಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಲ್ಪಸಂಖ್ಯಾತ ಸಮುದಾಯದವರಿಗೆ 10 ವಸತಿ ಶಾಲೆ ಘೋಷಿಸಿದ ರಾಜ್ಯ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.