ETV Bharat / state

ಆಟೋದಲ್ಲಿ ಗಾಂಜಾ ಮಾರಾಟ ಯತ್ನ: ಮೂವರು ಆರೋಪಿಗಳು ಪೊಲೀಸರ ಬಲೆಗೆ

author img

By

Published : Oct 1, 2020, 1:17 PM IST

ಬೆಂಗಳೂರಲ್ಲಿ ಡ್ರಗ್ಸ್ ಜಾಲದ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹಲವೆಡೆ ದಾಳಿ ನಡೆಸಿ ಪೆಡ್ಲರ್​​​ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದೀಗ ನಗರದಲ್ಲಿ ಆಟೋ ಮೂಲಕ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

3-people-arrested-for-trying-to-sale-drug-in-auto
ಗಾಂಜಾ ಮಾರಾಟಗಾರರ ಬಂಧನ

ಬೆಂಗಳೂರು: ಸ್ಯಾಂಡಲ್​​​ವುಡ್​ಗೆ ಡ್ರಗ್ಸ್​​ ನಂಟಿನ ಆರೋಪ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರು ಸದ್ಯ ನಗರದೆಲ್ಲೆಡೆ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ‌ ಗಾಂಜಾ ಸಾಗಿಸಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ತಿಕ್ ಅಲಿಯಾಸ್​​​​ ಕಬಾಲಿ, ವಿಕ್ಕಿ ಎಂ, ಪ್ರೇಮ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್ ಅಲಿಯಾಸ್​​ ಕಬಾಲಿ ಮೇಲೆ ಈ ಹಿಂದೆ ಎರಡು ಪ್ರಕರಣಗಳಿದ್ದು, ನಂತರ ಜಾಮೀನು ಮೇಲೆ ಹೊರಬಂದು ಮತ್ತೆ ಗಾಂಜಾ ಪೆಡ್ಲಿಂಗ್​​​​​​​ ಮಾಡುತ್ತಿದ್ದ. ಇನ್ನು ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾದ ಪ್ರೇಮ್ ಕುಮಾರ್, ಕಾರ್ತಿಕ್ ಜೊತೆ ಸೇರಿ ಗಾಂಜಾ ಮಾರುತ್ತಿದ್ದನಂತೆ.

3-people-arrested-for-trying-to-sale-drug-in-auto
ಗಾಂಜಾ ಮಾರಾಟಕ್ಕೆ ಯತ್ನಿಸಿದವರನ್ನು ಬಂಧಿಸಿದ ಶ್ರೀರಾಮ್​​​​ ಪುರ ಪೊಲೀಸರು

ಸದ್ಯ ತನಿಖೆ ವೇಳೆ ಅರೋಪಿಗಳು ಒಡಿಶಾದಿಂದ ಗಾಂಜಾ ಖರೀದಿಸಿ ರೈಲಿನಲ್ಲಿ‌ ನಗರಕ್ಕೆ ತಂದು‌ ವಿದ್ಯಾರ್ಥಿಗಳನ್ನು ಟಾರ್ಗೆಟ್​​ ಮಾಡಿ ಶ್ರೀರಾಮ್ ಪುರ, ರಾಜಾಜಿನಗರ, ಸುಬ್ರಮಣ್ಯ ನಗರ ಶೇಷಾದ್ರಿಪುರಂ ಸೇರಿ‌ ನಗರದ ಹಲವೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯನ್ನು ಬಿಚ್ಚಿಟ್ಟಿದಾರೆ.

ಶ್ರೀರಾಮ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.