ನೆಲಮಂಗಲ: ಸ್ನೇಹಿತರ ಹಣವನ್ನ ಡಿಡಿ ಮಾಡಿಸಲು ಬಂದಿದ್ದ ವ್ಯಕ್ತಿ ಸ್ಕೂಟರ್ ಡಿಕ್ಕಿಯಲ್ಲಿ ಹಣವಿಟ್ಟು ಸಬ್ ರಿಜಿಸ್ಟರ್ ಕಚೇರಿಗೆ ತೆರಳಿದ್ದಾರೆ. ವಾಪಸ್ ಬರುವುದರೊಳಗೆ ಬೈಕ್ ಡಿಕ್ಕಿಯಲ್ಲಿದ್ದ 3.20 ಲಕ್ಷ ಹಣವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಸಬ್ ರಿಜಿಸ್ಟರ್ ಕಚೇರಿ ಬಳಿ ಘಟನೆ ನಡೆದಿದೆ. ಅಂಚೆಪಾಳ್ಯದ ಶ್ರೀನಿವಾಸಮೂರ್ತಿ ಎಂಬುವರು ತಮ್ಮ ಸ್ನೇಹಿತರ ಹಣವನ್ನ ಡಿಡಿ ಮಾಡಿಸುವ ಕಾರಣಕ್ಕೆ ನಗದು ಹಣ ತಂದಿದ್ದರು. ಬ್ಯಾಂಕ್ನಲ್ಲಿ ಸರ್ವರ್ ಸಮಸ್ಯೆ ಇದ್ದ ಕಾರಣಕ್ಕೆ ಹಾಗೆಯೇ ಮಾದನಾಯಕನಹಳ್ಳಿ ಸಬ್ ರಿಜಿಸ್ಟರ್ ಕಚೇರಿಗೆ ಚಾಲನ್ ಮಾಡಿಸಲು ಬಂದಿದ್ದಾರೆ. 3.20 ಲಕ್ಷ ನಗದು ಹಣವನ್ನ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟು ಸಬ್ ರಿಜಿಸ್ಟರ್ ಕಚೇರಿಗೆ ತೆರಳಿದ್ದಾರೆ. ವಾಪಸ್ ಬಂದು ನೋಡಿದ್ದಾಗ ಅಲ್ಲಿದ್ದ ಹಣ ಕಾಣೆಯಾಗಿದೆ.
ನಂತರ ಸಿಸಿ ಕ್ಯಾಮೆರಾ ಪುಟೇಜ್ ಪರಿಶೀಲನೆ ಮಾಡಿದಾಗ, ಇವರನ್ನೇ ಫಾಲೋ ಮಾಡಿಕೊಂಡು ಎರಡು ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಸ್ಕೂಟರ್ ಡಿಕ್ಕಿ ತೆಗೆದು ಕ್ಷಣದಲ್ಲೇ ಹಣ ಕದ್ದು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬಸವರಾಜ ಬೊಮ್ಮಾಯಿ ಸಿಎಂ ಆಗ್ತಾರೆ ಎಂದಿದ್ದರಂತೆ ಚನ್ನಬಸವ ದೇಶಿಕೇಂದ್ರ ಶ್ರೀ