ಬೆಂಗಳೂರು: ಹುಳಿಮಾವು ಕೆರೆಯ ದುರಂತದಿಂದ ಸುಮಾರು 29 ಕೋಟಿ ನಷ್ಟವಾಗಿದೆ ಎಂದು ವರದಿ ಬಂದಿದೆ ಅಂತಾ ಬಿಬಿಎಂಪಿ ಆಯುಕ್ತರಾದ ಬಿಎಚ್ ಅನೀಲ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೆ ಇದುವರೆಗೂ ಸುಮಾರು 156 ಮಂದಿಗೆ 28 ಲಕ್ಷದಷ್ಟು ಪರಿಹಾರ ಹಣವನ್ನು ಆರ್ಟಿಜಿಎಸ್ ಮೂಲಕ ಸಂತ್ರಸ್ತರ ಅಕೌಂಟಿಗೆ ಹಣವನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹುಳಿಮಾವು ಕೆರೆ ದುರಂತದ ಪರಿಹಾರಕ್ಕೆ ಅರ್ಹರಾದ ಸುಮಾರು 319 ಮಂದಿಯನ್ನು ಲಿಸ್ಟ್ ಮಾಡಲಾಗಿತ್ತು. ಆದರೆ ಆ ಲಿಸ್ಟ್ ಫಿಲ್ಟರ್ ಮಾಡಿ 156 ಮಂದಿ ಅರ್ಹರಿಗೆ ನಿನ್ನೆ ಮತ್ತು ಇಂದು ಪರಿಹಾರ ನೀಡಲಾಗಿದೆ ಎಂದರು.
ಅಲ್ಲದೆ ಕೆರೆ ದುರಂತದಿಂದ ಔಟ್ ಲೈನ್ ವಲಯದಲ್ಲಿ ಮನೆ ಡ್ಯಾಮೇಜ್ ಆಗಿರುವ, ಆರ್ಥಿಕವಾಗಿ ಸದೃಡವಲ್ಲದವರನ್ನು ಬಿಡಬೇಡಿ, ಸರ್ವೆ ಮಾಡಿ ಅಂತಹವರಿದ್ದರೆ ಗುರುತಿಸಿ ಅವರಿಗೂ ಪರಿಹಾರ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.