ಬೆಂಗಳೂರು: ಗುಜರಾತ್ನಿಂದ ಪ್ರಾಣವಾಯು ಹೊತ್ತು ಆಗಮಿಸಿದ 28ನೇ ಆಕ್ಸಿಜನ್ ಎಕ್ಸ್ಪ್ರೆಸ್ ವಿಶೇಷ ರೈಲು ಭಾನುವಾರ ಸಂಜೆ 6:30 ರ ಸುಮಾರಿಗೆ ನಗರದ ವೈಟ್‌ಫೀಲ್ಡ್ ಕಂಟೇನರ್ ಡಿಪೋ ತಲುಪಿತು.
ಈ ವಿಶೇಷ ರೈಲು ಶನಿವಾರ ಬೆಳಗ್ಗೆ 11:45ಕ್ಕೆ ಗುಜರಾತ್ನ ಕಾನಾಲಸ್ನಿಂದ ಹೊರಟಿತ್ತು. ಒಟ್ಟು 6 ಕ್ರಯೋಜೆನಿಕ್ (cryogenic) ಕಂಟೇನರ್ಗಳ ಮೂಲಕ 117.11 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದೆ. ಇದುವರೆಗೆ ರಾಜಧಾನಿ ಬೆಂಗಳೂರಿಗೆ 28 ರೈಲುಗಳ ಮೂಲಕ 3,213.99 ಟನ್ ದ್ರವ ವೈದ್ಯಕೀಯ ಆಮ್ಲಜನಕ ತರಲಾಗಿದೆ.
376 ಆಕ್ಸಿಜನ್ ಎಕ್ಸ್ಪ್ರೆಸ್ಗಳಿಂದ ಪ್ರಾಣವಾಯು ಸಾಗಾಟ:
ಭಾರತೀಯ ರೈಲ್ವೆ ಇದುವರೆಗೆ 376 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಬಿಟ್ಟಿದ್ದು, ಒಟ್ಟು 1,534 ಟ್ಯಾಂಕರ್‌ಗಳಲ್ಲಿ 26,281 ಟನ್‌ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಲಾಗಿದೆ ಮತ್ತು ಕೋವಿಡ್ -19 ವಿರುದ್ಧದ ಹೋರಾಟಕ್ಕೆ 15 ರಾಜ್ಯಗಳಿಗೆ ಪರಿಹಾರ ನೀಡಿದೆ.
ಇದನ್ನೂ ಓದಿ: ತಗ್ಗಿದ ಕೋವಿಡ್ ಅಬ್ಬರ : ನಾಳೆಯಿಂದ ಉಪನೋಂದಣಿ ಕಚೇರಿಗಳು ಓಪನ್!