ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ದಿನೇ ದಿನೆ ಆದಾಯ ಖೋಟಾದ ಪ್ರಮಾಣ ಏರಿಕೆ ಆಗುತ್ತಿದೆ. ಮುಷ್ಕರದಿಂದ ನಿತ್ಯ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ನಷ್ಟ ಉಂಟಾಗಿದ್ದು, ಒಟ್ಟಾರೆ 15 ದಿನಗಳ ಮುಷ್ಕರದಿಂದ 297 ಕೋಟಿಯಷ್ಟು ನಷ್ಟ ಅನುಭವಿಸಿದೆ. ಬಸ್ ಸಂಚಾರವಿಲ್ಲದೇ ನಾಲ್ಕು ನಿಗಮಗಳ ಆದಾಯಕ್ಕೆ ಪೆಟ್ಟು ಬಿದ್ದಿದೆ.
15 ದಿನಗಳಲ್ಲಿ ಕೋಟಿ ಕೋಟಿ ನಷ್ಟ
1) ಕೆಎಸ್ಆರ್ಟಿಸಿ -122.50 ಕೋಟಿ ಆದಾಯ ಖೋತಾ
2) ಬಿಎಂಟಿಸಿ - 45 ಕೋಟಿ ಆದಾಯ ಖೋತಾ
3) ಎನ್ ಡಬ್ಲ್ಯೂಕೆಎಸ್ಆರ್ಟಿಸಿ- 57.50 ಕೋಟಿ ಆದಾಯ
4) ಎನ್ ಇಕೆಎಸ್ಆರ್ಟಿಸಿ - 62 ಕೋಟಿ
ಒಟ್ಟಾರೆ, 287 ಕೋಟಿ ಆದಾಯ ನಷ್ಟವನ್ನ ಅನುಭವಿಸಿದೆ. ಮೊದಲೇ ನಷ್ಟದಲ್ಲಿರುವ ನಿಗಮಗಳು ಮುಷ್ಕರದಿಂದ ಇನ್ನಷ್ಟು ಪಾತಾಳಕ್ಕೆ ಹೋಗಿದ್ದಂತೂ ನಿಜ. ಸದ್ಯ ಮುಷ್ಕರ ಅಂತ್ಯವಾಗಿದ್ದು, ನಾಳೆಯಿಂದ ಬಸ್ಗಳ ಕಾರ್ಯಾಚರಣೆ ಆಗಲಿದೆ. ಆದರೆ, ಕೊರೊನಾ ಕಾರಣಕ್ಕೆ ಶೇ. 50 ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ನಷ್ಟವೋ ಲಾಭವೋ ಎನ್ನುವ ಪ್ರಶ್ನೆ ಕಾಡದೇ ಇರೋಲ್ಲ.
ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದ ನೌಕರರಿಗೆ ಧನ್ಯವಾದಗಳು: ಡಿಸಿಎಂ ಲಕ್ಷ್ಮಣ ಸವದಿ
ಸರ್ಕಾರದ ಮನವಿಗೆ ಓಗೊಟ್ಟು ಇಂದು ಸಂಜೆಯ ವೇಳೆಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಗಿದೆ. ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಈ ಬಗ್ಗೆ ನಾನು ಧನ್ಯವಾದಗಳನ್ನು ತಿಳಿಯ ಬಯಸುತ್ತೇನೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಕೋವಿಡ್‍ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಅವಶ್ಯಕ. ಇದನ್ನ ಮನಗಂಡು ಕರ್ತವ್ಯ ಪ್ರಜ್ಞೆ ಮೆರೆದವರಿಗೆ ಹಾಗೂ ಅದೇ ರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರು ಸಹಕಾರ ನೀಡಿದ್ದನ್ನು ಸ್ಮರಿಸುತ್ತೇನೆ ಅಂದಿದ್ದಾರೆ. ನಾಳೆಯಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣ ಪ್ರಮಾಣದಲ್ಲಿ ಸುಗಮಗೊಳ್ಳಲಿದೆ ಎಂದರು.
ಓದಿ: ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟವರ ಮೇಲೆ ಕ್ರಮ: ಡಿ ಸಿ ರಾಮಚಂದ್ರನ್