ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 26 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಹುದ್ದೆಗೆ ಭಡ್ತಿ ನೀಡಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
2016ರ ಬ್ಯಾಚ್‌ನ ಎಂ.ವಿ.ಚಂದ್ರಕಾಂತ್, ಎಂ.ಎಲ್.ಮಧುರವೀಣಾ, 2017ನೇ ಬ್ಯಾಚ್‌ನ ಚನ್ನಬಸವಣ್ಣ ಲಂಗೋಟಿ, ಜಯಪ್ರಕಾಶ್, ಕೆ.ಪಿ.ಅಂಜಲಿ, ಎಂ.ನಾರಾಯಣ, ಎಂ.ಮುತ್ತುರಾಜ್, ಶೇಖರ್ ಎಚ್ ಟೆಕ್ಕಣ್ಣನವರ್, ರವೀಂದ್ರ ಕಾಶಿನಾಥ್ ಗಡಾದಿ, ಅನಿತಾ ಭೀಮಪ್ಪ ಹದ್ದಣ್ಣನವರ್, ಎ.ಕುಮಾರಸ್ವಾಮಿ, ಸಾರಾ ಫಾತಿಮಾ, ರಶ್ಮೀ ಪರಡಿ, ಎಂ.ಎ.ಅಯ್ಯಪ್ಪ ಮತ್ತು 2019ನೇ ಬ್ಯಾಚ್‌ನ ಶಿವಕುಮಾರ್, ಮಲ್ಲಿಕಾರ್ಜುನ ಬಾಳದಂಡಿ, ವೈ. ಅಮರನಾಥ್ ರೆಡ್ಡಿ, ಪವನ್ ನಿಜ್ಜುರ್, ಬಿ.ಎಲ್. ಶ್ರೀಹರಿ ಬಾಬು, ಎಂ.ಎಸ್.ಗೀತಾ, ಯಶೋಧಾ ವಂಟಗೋಡಿ, ಎಂ.ರಾಜೀವ್, ವಿ.ಜೆ.ಶೋಭಾ ರಾಣಿ, ಡಾ ಎಸ್.ಕೆ.ಸೌಮ್ಯಲತಾ, ಬಿ.ಟಿ.ಕವಿತಾ, ಉಮಾ ಪ್ರಶಾಂತ್ ರನ್ನು ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಮುಂಬಡ್ತಿ ಪಡೆದ ಅಧಿಕಾರಿಗಳು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ, ಗುಪ್ತಚರ, ವಿಶೇಷ ಕಾರ್ಯಪಡೆ ಸೇರಿದಂತೆ ರಾಜ್ಯದ ವಿವಿಧ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ವಕೀಲರನ್ನು ನೇಮಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟದ್ದು: ಹೈಕೋರ್ಟ್