ETV Bharat / state

ರಾಜ್ಯದಲ್ಲಿ ನಿಲ್ಲದ ಕೊರೊನಾ ಅಬ್ಬರ: ಇವತ್ತು 2,496 ಹೊಸ ಪ್ರಕರಣ, 87 ಸಾವು

author img

By

Published : Jul 14, 2020, 7:16 PM IST

Updated : Jul 14, 2020, 7:32 PM IST

ರಾಜ್ಯದಲ್ಲೂ ಕೊರೊನಾ ಅಬ್ಬರ ಜೋರಾಗಿದೆ. ಪ್ರತಿದಿನ 2 ಸಾವಿರಕ್ಕೂ ಅಧಿಕ ಹೊಸ ಸೋಂಕಿತ ಕೇಸ್​​ಗಳು ದೃಢಪಡುತ್ತಿದ್ದು, ಬೆಂಗಳೂರಿನಲ್ಲಿ ದಾಖಲೆಯ ಮಟ್ಟದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

COVID-19
COVID-19

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಅಬ್ಬರ ಜೋರಾಗಿದ್ದು, ಇಂದು ಕೂಡ ಎರಡು ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ಪತ್ತೆಯಾಗಿವೆ.

ಇಂದು 2,496 ಹೊಸ ಕೇಸ್​ ಪತ್ತೆಯಾಗಿದ್ದು, 87 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದೀಗ ಕೋವಿಡ್​ ಸೋಂಕಿತ ಪ್ರಕರಣಗಳ ಸಂಖ್ಯೆ 44,077 ಆಗಿದ್ದು, ಇದರಲ್ಲಿ 25,839 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 17,389 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಇವತ್ತೂ ಕೂಡ ವಿವಿಧ ಆಸ್ಪತ್ರೆಗಳಿಂದ 1,142 ಸೋಂಕಿತರು ಡಿಸ್ಚಾರ್ಜ್​ ಆಗಿದ್ದು, ಒಟ್ಟು ಸಾವಿನ ಸಂಖ್ಯೆ 842 ಆಗಿದೆ.

ಬೆಂಗಳೂರಿನಲ್ಲಿ ಇಂದು ದಾಖಲೆಯ 1,267 ಕೋವಿಡ್​ ಪ್ರಕರಣ ಪತ್ತೆಯಾಗಿದ್ದು, 56 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 15,052 ತಲುಪಿದೆ. ಇಲ್ಲಿಯವರೆಗೆ 8,56,148 ಜನರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಇಂದೇ 22,653 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ.

Last Updated : Jul 14, 2020, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.