ಬೆಂಗಳೂರು: ನಗರದಲ್ಲಿ ಇಂದು 23 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಆರು ಜನರಿಗೆ ಪ್ರಯಾಣದ ಇತಿಹಾಸ ಇದ್ದರೆ ಉಳಿದೆಲ್ಲವೂ ಬೆಂಗಳೂರಿನ ಜನರಿಗೆ ಕೊರೊನಾ ಸೋಂಕು ಲಕ್ಷಣದಿಂದ, ದೃಢಪಟ್ಟ ಪ್ರಕರಣಗಳಾಗಿದೆ. ಇಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಪತ್ತೆಯಾಗಿದೆ. ಮೂವರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಹರಡಿದೆ. ಉಳಿದಂತೆ ಎಲ್ಲವೂ ಹೊಸ ಪ್ರದೇಶಗಳಲ್ಲಿ ಕೊರೊನಾ ಕಂಡುಬಂದಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆ 475 ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರ ಸಂಖ್ಯೆ ಹದಿನೈದಕ್ಕೆ ಏರಿಕೆಯಾಗಿದ್ದು, ಗುಣಮುಖರಾದವರು ಒಟ್ಟು 298 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೊಸ ಪ್ರದೇಶಗಳ ಕೊರೊನಾ ಸೋಂಕಿನ ವಿವರ ಇಂತಿದೆ :
P- 5321 - 66 ವರ್ಷದ ಹೆಣ್ಣು (SARI) ತೀವ್ರ ಉಸಿರಾಟದ ಸಮಸ್ಯೆ - ಬೆಂಗಳೂರು ಹೊರವಲಯ
P- 5324 - 48 ವರ್ಷದ ಹೆಣ್ಣು - ತೀವ್ರ ಉಸಿರಾಟದ ಸಮಸ್ಯೆ
P-5326- 27 ವರ್ಷದ ಗಂಡು - P4006 ರ ಸಂಪರ್ಕ
P- 5327 - 32 ವರ್ಷದ ಹೆಣ್ಣು - ಸೋಂಕಿನ ಲಕ್ಷಣ - ಅಂಜನಪ್ಪ ಗಾರ್ಡನ್
P-5328- 25 ವರ್ಷದ ಗಂಡು - ಸೋಂಕಿನ ಲಕ್ಷಣ - ಸ್ಯಾಟಲೈಟ್ ಬಸ್ ಸ್ಟಾಪ್ - ಆವಲಹಳ್ಳಿ
P-5329- 57 ವರ್ಷದ ಹೆಣ್ಣು - ಸೋಂಕಿನ ಲಕ್ಷಣ - ಬೆನ್ಸನ್ ಟೌನ್
P-5330- 52 ವರ್ಷದ ಗಂಡು - P2652 ಸಂಪರ್ಕ- ಡಿಕೆನ್ಸನ್ ರೋಡ್
P-5331- 57 ವರ್ಷದ ಗಂಡು - ಸೋಂಕಿನ ಲಕ್ಷಣ - ಸ್ವಿಮ್ಮಿಂಗ್ ಪೂಲ್ ಎಕ್ಸ್ ಟೆನ್ಷನ್ ಮಲ್ಲೇಶ್ವರಂ
P- 5332- 33 ವರ್ಷದ ಗಂಡು- ಸೋಂಕಿನ ಲಕ್ಷಣ - ಕ.ವಿ.ಕಾ ಲೇಔಟ್
P-5333- 32 ವರ್ಷದ ಹೆಣ್ಣು -ಸೋಂಕಿನ ಲಕ್ಷಣ - ದುಬೈ ಲೇಔಟ್ ಶಾಂಪುರ ಮೇನ್ರೋಡ್
P-5334- 50 ವರ್ಷದ ಹೆಣ್ಣು - ಸೋಂಕಿನ ಲಕ್ಷಣ - ಚಾಮರಾಜಪೇಟೆ
P-5335 48 ಹೆಣ್ಣು- ಸೋಂಕಿನ ಲಕ್ಷಣ - ಕಲಾಸಿಪಾಳ್ಯ
P-5336- 72 ವರ್ಷದ ಗಂಡು- P4317 ಸಂಪರ್ಕ
P-5341 - 48 ವರ್ಷದ ಹೆಣ್ಣು- P469 ಸಂಪರ್ಕ - ಕಲಾಸಿಪಾಳ್ಯ
P- 5342 - 50 ವರ್ಷದ ಗಂಡು -ಸೋಂಕಿನ ಲಕ್ಷಣ - ಕಲಾಸಿಪಾಳ್ಯ
P-5343 - 22 ವರ್ಷದ ಹೆಣ್ಣು -ಸೋಂಕಿನ ಲಕ್ಷಣ - ಪೂರ್ವ ವಲಯ
ಉಳಿದಂತೆ ಆಂಧ್ರಪ್ರದೇಶದಿಂದ ಬಂದ ಮೂವರಿಗೆ, ಬಳ್ಳಾರಿಯಿಂದ ಬಂದ ಒಬ್ಬರಿಗೆ, ದುಬೈನಿಂದ ಮರಳಿದ ಇಬ್ಬರಿಗೆ ಹಾಗೂ ದೆಹಲಿ ಪ್ರಯಾಣಿಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಂಟೇನ್ಮೆಂಟ್ ಝೋನ್ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ.