2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದ್ದು, ಡಾ.ವಿಜಯಾ ಅವರ 'ಕುದಿ ಎಸರು' ಎಂಬ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಈ ಪ್ರಶಸ್ತಿಯನ್ನು 2020ರ ಫೆ.25ರಂದು ವಿತರಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯಮ್ಮ ಎಂದೇ ಕರೆಯಲ್ಪಡುವ ಡಾ.ವಿಜಯಾ ಅವರ ಆತ್ಮಕಥನ 'ಕುದಿ ಎಸರು' ಇದಾಗಿದ್ದು, ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಮೊದಲ ಬಾರಿಗೆ ಕನ್ನಡದಲ್ಲಿ 1955ರಲ್ಲಿ ಮಹಾಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಭಾರತದ ಒಟ್ಟು 24 ಭಾಷೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂ. ನಗದು ಮತ್ತು ಫಲಕ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ನೇಪಾಳಿ ಭಾಷೆ ಹೊರತು ಪಡಿಸಿ 23 ಭಾಷೆಗಳಿಗೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇನ್ನು 77 ವರ್ಷದ ಡಾ. ವಿಜಯಾ ಅವರು ದಾವಣಗೆರೆಯವರು. ಪತ್ರಕರ್ತೆ, ರಂಗ ಸಾಹಿತ್ಯ ಕ್ಷೇತ್ರಗಳಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ಧಾರೆ. ಅನೇಕ ಕನ್ನಡ ಮಾಸ ಮತ್ತು ವಾರ ಪತ್ರಿಕೆಗಳಲ್ಲಿ ಸಂಪಾದಕ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ.
-
PRESS RELEASE: Sahitya Akademi announced its annual Sahitya Akademi Award- 2019 in 23 languages today. @prahladspatel, @pspoffice, @MinOfCultureGoI, @ksraosahitya, @PIB_India, @MIB_India, @DDNational pic.twitter.com/KqDdWSnAnk
— Sahitya Akademi (@sahityaakademi) December 18, 2019 " class="align-text-top noRightClick twitterSection" data="
">PRESS RELEASE: Sahitya Akademi announced its annual Sahitya Akademi Award- 2019 in 23 languages today. @prahladspatel, @pspoffice, @MinOfCultureGoI, @ksraosahitya, @PIB_India, @MIB_India, @DDNational pic.twitter.com/KqDdWSnAnk
— Sahitya Akademi (@sahityaakademi) December 18, 2019PRESS RELEASE: Sahitya Akademi announced its annual Sahitya Akademi Award- 2019 in 23 languages today. @prahladspatel, @pspoffice, @MinOfCultureGoI, @ksraosahitya, @PIB_India, @MIB_India, @DDNational pic.twitter.com/KqDdWSnAnk
— Sahitya Akademi (@sahityaakademi) December 18, 2019
2019ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿ ಹೀಗಿದೆ:
ಅಸ್ಸಾಮೀ: ಚಾಣಕ್ಯ (ಕಾದಂಬರಿ) ಜಾಯ್ಶ್ರೀ ಗೋಸ್ವಾಮಿ ಮಹಂತಾ
ಬಂಗಾಳಿ: ಘುಮೇರ್ ದರ್ಜಾ ಥೆಲೆ (ಪ್ರಬಂಧ) ಚಿನ್ಮೋಯ್ ಗುಹಾ
ಬೋಡೋ: ಅಖಾಯ್ ಅಥುಮ್ನಿಫ್ರಾಯಿ (ಕವನ): ಫುಕನ್ ಚ ಬಸುಮತಾರಿ
ಡೋಗ್ರಿ: ಬಂದ್ರಾಲ್ಟ ದರ್ಪನ್ (ಪ್ರಬಂಧ): ಓಂ ಶರ್ಮಾ ಜಾಂದ್ರಿಯಾರಿ
ಆಂಗ್ಲ: ಆ್ಯನ್ ಎರಾ ಆಫ್ ಡಾರ್ಕ್ನೆಸ್ –ಶಶಿ ತರೂರು
ಗುಜರಾತಿ: ಮೋಜ್ಮಾ ರೇವು ರೇ (ಪ್ರಬಂಧ) ರತಿಲಾಲ್ ಬೋರಿಸಾಗರ್
ಹಿಂದಿ: ಛೀಲಟೆ ಹುವೇ ಅಪ್ನೇ ಕೋ (ಕವನ) ನಂದ ಕಿಶೋರ್ ಆಚಾರ್ಯ
ಕನ್ನಡ: ಕುದಿ ಎಸರು (ಆತ್ಮಕಥೆ) –ಡಾ. ವಿಜಯಾ
ಕಾಶ್ಮೀರಿ: ಅಖ್ ಯಾದ್ ಅಖ್ ಖಯಾಮತ್ (ಕಿರುಕತೆ) –ಅಬ್ದುಲ್ ಅಹಾದ್ ಹಾಜಿನಿ
ಕೊಂಕಣಿ: ದಿ ವರ್ಡ್ಸ್ (ಕನವ) ನೀಲಬಾ ಎ. ಖಂಡೇಕರ್
ಮೈಥಿಲಿ: ಜಿಂಗಿಕ್ ಓರಿಯಾವೋನ್ ಕರಾಯಿತ್ (ಕವನ) – ಕುಮಾರ್ ಮನೀಶ್ ಅರವಿಂದ್
ಮಲಯಾಳಂ: ಅಚನ್ ಪಿರನ್ನ ವೀಡು (ಕವನ) ಮಧುಸೂದನನ್ ನಾಯರ್
ಮಣಿಪುರಿ: ಏ ಅಮದಿ ಅದುಂಗೇಗಿ ಈಥಾಟ್ (ಕಾದಂಬರಿ) ಎಲ್. ಬೀರ್ಮಂಗೋಲ್ ಸಿಂಗ್
ಮರಾಠಿ: ಕದಾಚಿತ್ ಅಜೂನಹಿ (ಕವನ) ಅನುರಾಧಾ ಪಾಟೀಲ್
ಒಡಿಯಾ: ಭಾಸ್ವತಿ (ಕಿರುಕತೆ) ತರುಣ್ ಕಾಂತಿ ಮಿಶ್ರಾ
ಪಂಜಾಬಿ: ಆಂಥೀನ್ (ಕಿರುಕತೆ) ಕಿರ್ಪಾಲ್ ಕಜಕ್
ರಾಜಸ್ಥಾನೀ: ಬರೀಕ್ ಬಾತ್ (ಕಿರುಕತೆ) ರಾಮಸ್ವರೂಪ್ ಕಿಸಾನ್
ಸಂಸ್ಕೃತ: ಪ್ರಜ್ಞಾಚಕ್ಷುಶಮ್ (ಕವನ) ಪೆನ್ನಾ ಮಧುಸೂದನ್
ಸಂತಾಲಿ: ಸಿಸಿರ್ಜಾಲಿ (ಕಿರುಕತೆ) ಕಾಲಿ ಚರಣ್ ಹೇಂಬ್ರಮ್
ಸಿಂಧಿ: ಜೀಜಲ್ (ಕಿರುಕತೆ) ಈಶ್ವರ್ ಮೂರ್ಜಾನಿ
ತಮಿಳು: ಸೂಲ್ (ಕಾದಂಬರಿ) ಚೋ. ಧರ್ಮನ್
ತೆಲುಗು: ಸಪ್ತಭೂಮಿ (ಕಾದಂಬರಿ) ಬಂಡಿ ನಾರಾಯಣ ಸ್ವಾಮಿ
ಉರ್ದು: ಸವಾನೇ-ಎ-ಸಿರ್ ಸಯದ್ ಏಕ್ ಬಾಜ್ದೀದ್ (ಜೀವನಕಥನ) ಶಫೇ ಕಿಡ್ವಾಯಿ