ETV Bharat / state

ಜನತಾ ನ್ಯಾಯಾಲಯದ ತೀರ್ಪು ಇವಿಎಂನಲ್ಲಿ ಭದ್ರ, ಸೋಮವಾರ ಸರ್ಕಾರದ ಹಣೆಬರಹ ಪ್ರಕಟ - ಡಿಸೆಂಬರ್​ 9ಕ್ಕೆ ಉಪ ಚುನಾವಣೆ ಫಲಿತಾಂಶ

ಕೆಲವೆಡೆ ಇವಿಎಂ ದೋಷ, ಕೆಲವು ಸಣ್ಣಪುಟ್ಟ ಗೊಂದಲದ ನಡುವೆ 15 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

15 ಕ್ಷೇತ್ರಗಳ ಉಪ ಚುನಾವಣೆ ಅಂತ್ಯ,Karnataka bypolls latest news
ಸೋಮವಾರ ಸರ್ಕಾರದ ಹಣೆಬರಹ ಪ್ರಕಟ
author img

By

Published : Dec 5, 2019, 8:41 PM IST

Updated : Dec 6, 2019, 12:00 AM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ 66.25ರಷ್ಟು ಮತದಾನ ದಾಖಲಾಗಿದೆ.

ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್​, ಹುಣಸೂರು, ಕೆ.ಆರ್​. ಪೇಟೆ, ಕೆ.ಆರ್. ಪುರಂ, ಹೊಸಕೋಟೆ, ರಾಣೆಬೆನ್ನೂರು, ಕಾಗವಾಡ, ಗೋಕಾಕ್, ಅಥಣಿ, ವಿಜಯನಗರ, ಶಿವಾಜಿನಗರ, ಹಿರೇಕೆರೂರು​ ಮತ್ತು ಯಲ್ಲಾಪುರ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆಯಿತು.

ಜನತಾ ನ್ಯಾಯಾಲಯದ ತೀರ್ಪು ಇವಿಎಂನಲ್ಲಿ ಭದ್ರ

ಮುಂಜಾನೆ 7 ಗಂಟೆಗೆ ವೋಟಿಂಗ್ ಶುರುವಾಗುತ್ತಿದ್ದಂತೆ ಹಲವು ಕ್ಷೇತ್ರಗಳಲ್ಲಿ ಮತಪ್ರಭುಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ ಸಂಜೆ ನಂತರ ಮತಗಟ್ಟೆಗೆ ಆಗಮಿಸಿದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಜ್ಯಾದ್ಯಂತ ಶೇ.66.25 ರಷ್ಟು ಮತದಾನವಾಗಿದೆ ಎಂದ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ. ಹೊಸಕೋಟೆಯಲ್ಲಿ ಅತಿಹೆಚ್ಚು ಶೇ.86.77 ಮತ್ತು ಕೆ.ಆರ್​.ಪುರಂನಲ್ಲಿ ಶೇ.43.25​ ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.

ಹುಣಸೂರಿನಲ್ಲಿ ಗೊಂದಲ:
ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬಿಜೆಪಿಗರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಇತ್ತ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರ ಸ್ವಗ್ರಾಮ ಹುಣಸೂರು ತಾಲೂಕಿನ ಹೊಸರಾಮನಹಳ್ಳಿಗೆ ಮತ ಹಾಕಲು ಆಗಮಿಸಿದ್ದರು. ಗ್ರಾಮದ ಮತಗಟ್ಟೆಗೆ ಆಗಮಿಸಿ ಹೊರ ಬರುತ್ತಿದ್ದಂತೆ, ಅಲ್ಲಿದ್ದ ಪೊಲೀಸ್ ಇನ್ಸ್​ಪೆಕ್ಟರ್ ಶಾಸಕರನ್ನು ತಡೆದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಶಾಸಕರು, ಇನ್ಸ್​ಪೆಕ್ಟರ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಶಾಸಕರ ಬೆಂಬಲಿಗರು ಇನ್ಸ್​ಪೆಕ್ಟರ್ ವಿರುದ್ಧ ಕೋಪತಾಪ ತೋರಿಸಿದ್ರು.

ಕೈಕೊಟ್ಟ ಇವಿಎಂ:
ಮಹಾಲಕ್ಷ್ಮಿ ಲೇಔಟ್​ ಕ್ಷೇತ್ರದ ನಾಗಪುರ ವಾರ್ಡ್​ನ ಬೂತ್ ನಂಬರ್ 72 ಮತ್ತು 188ನೇ ಮತಗಟ್ಟೆ ಕೇಂದ್ರ, ಕೆ.ಆರ್​.ಪೇಟೆಯ ಹೆಗ್ಗಡಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 98 ಹಾಗೂ ಮುರುಕನಹಳ್ಳಿ ಮತಗಟ್ಟೆಯಲ್ಲಿ ಇವಿಎಂನಲ್ಲಿ ದೋಷ ಕಂಡುಬಂದಿತ್ತು. ಕೆಲಹೊತ್ತಿನ ಬಳಿಕ ಸಿಬ್ಬಂದಿ ಹೊಸ ಮತಯಂತ್ರ ತಂದು ಮಾತದಾನ ಪ್ರಕ್ರಿಯೆ ನಡೆಸಿದ್ದಾರೆ. ಇತ್ತ ಹೊಸಕೋಟೆಯಯ ಭುವನಹಳ್ಳಿ ಗ್ರಾಮದಲ್ಲೂ ಇಂತದ್ದೇ ಘಟನೆ ನಡೆದಿದೆ.

ಗೌಪ್ಯ ಮತದಾನ ಬಹಿರಂಗ:
ರಾಣೆಬೆನ್ನೂರಿನಲ್ಲಿ ಮತದಾರನೊಬ್ಬ ಬಿಜೆಪಿಗೆ ಮತ ಚಲಾಯಿಸಿರುವ ಫೋಟೋ ಬಹಿರಂಗಪಡಿಸಿದ್ದಾನೆ. ಅಥಣಿಯಲ್ಲೂ ಇಂತದ್ದೇ ಘಟನೆ ನಡೆದಿದ್ದು, ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀತಿ‌ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಜನರು ಆರೋಪಿಸಿದ್ದಾರೆ.

ಸಂಭ್ರಮ, ಸೂತಕದ ನೋವಲ್ಲೂ ಮತದಾನ:
ಯುವಕನೋರ್ವ ಇಂದು ಗೋವಾದಲ್ಲಿ ವಿವಾಹವಿದ್ದರೂ ಗೋಕಾಕ್ ಕ್ಷೇತ್ರದ ಕೊಣ್ಣೂರು ಗ್ರಾಮದಲ್ಲಿ ಮೊದಲು ಮತ ಚಲಾಯಿಸಿ ನಂತರ ಗೋವಾಕ್ಕೆ ಪ್ರಯಾಣ ಬೆಳೆಸಿದ್ದಾನೆ. ರಾಣೆಬೆನ್ನೂರಿನ ಮೆಡ್ಲೇರಿ ಗ್ರಾಮದಲ್ಲಿ ಬಾಣಂತಿಯೊಬ್ಬಳು ಮೂರು ತಿಂಗಳ ಮಗುವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ರು. ಇನ್ನು ಹಾವೇರಿಯ ರಟ್ಟಿಹಳ್ಳಿಯಲ್ಲಿ ತಾಯಿಯೊಬ್ಬಳು ತನ್ನ ಪುತ್ರನನ್ನ ಕಳೆದುಕೊಂಡ ನೋವಿನಲ್ಲೂ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಕೆಲವೆಡೆ ಇವಿಎಂ ದೋಷ, ಕೆಲವು ಸಣ್ಣಪುಟ್ಟ ಗೊಂದಲದ ನಡುವೆ 15 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ನಡೆದಿದೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಸೋಮವಾರ ಜನತಾ ನ್ಯಾಯಾಲಯದ ತೀರ್ಪು ಹೊರಬೀಳಲಿದೆ.

Intro:Body:Conclusion:
Last Updated : Dec 6, 2019, 12:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.