ಬೆಂಗಳೂರು: ರಾಜ್ಯದಲ್ಲಿಂದು 1704 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,73,046ಕ್ಕೆ ಏರಿಕೆ ಆಗಿದೆ. ಕೊರೊನಾದಿಂದ ಇಂದು 13 ಸೋಂಕಿತರು ಮೃತಪಟ್ಟಿದ್ದಾರೆ.
ಈ ಮೂಲಕ ಸಾವಿನ ಸಂಖ್ಯೆ 11,654ಕ್ಕೆ ಏರಿಕೆ ಆಗಿದೆ.19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.1.34ರಷ್ಟು ಹಾಗೂ ಸಾವಿನ ಪ್ರಮಾಣ ಶೇ 0.76 ರಷ್ಟು ಇದೆ.
ಕೊರೊನಾದಿಂದ 1537 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,36,505 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 470 ಸೋಂಕಿತರು ತೀವ್ರ ನಿಗಾಘಟಕದಲ್ಲಿ ಇದ್ದು, ರಾಜ್ಯದಲ್ಲಿ ಸದ್ಯ 24,868 ಸಕ್ರಿಯ ಪ್ರಕರಣಗಳು ಇವೆ. ಕಳೆದ 7 ದಿನಗಳಲ್ಲಿ 31,788 ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಸಂಪರ್ಕದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿ 1,41,860 ದ್ವಿತೀಯ ಸಂಪರ್ಕದಲ್ಲಿ 1,56,880 ಜನರು ಇದ್ದಾರೆ.
ಬೆಂಗಳೂರಿನಲ್ಲಿಂದು 1039 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,63,665ಕ್ಕೆ ಏರಿಕೆಯಾಗಿದೆ. 669 ಸೋಂಕಿತರು ಗುಣಮುಖರಾಗಿದ್ದು, 3,41,424 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 10 ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, 4068ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 18,172 ಇವೆ.