ETV Bharat / state

ಕರಾಳ ಭಾನುವಾರ! ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ 17 ಜನ ಸಾವು - ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿ ವ್ಯಕ್ತಿ ಸಾವು

ಭಾನುವಾರ ನಡೆದ ವಿವಿಧ ಪ್ರಕರಣಗಳಲ್ಲಿ ಹದಿನೇಳು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Black Sunday  people died in separate incidents  separate incidents in the Karnataka  ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ 17 ಜನ ಸಾವು  ವಿವಿಧ ಪ್ರಕರಣಗಳಲ್ಲಿ 17 ಜನರು ತಮ್ಮ ಪ್ರಾಣ  ಅಪಘಾತದಲ್ಲಿ ಆರು ಜನ ಸಾವು  ನಾಲ್ವರು ಸ್ನೇಹಿತರು ನೀರುಪಾಲು  ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿ ವ್ಯಕ್ತಿ ಸಾವು  ಮೈಸೂರಿನಲ್ಲಿ ನಾಲ್ವರು ಸಾವು
ಕರಾಳ ಭಾನುವಾರ.. ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ 17 ಜನ ಸಾವು
author img

By

Published : May 29, 2023, 8:33 AM IST

ಬೆಂಗಳೂರು: ಭಾನುವಾರ ರಜಾ ದಿನ. ಪ್ರವಾಸ, ಜಾಲಿಯಾಗಿ ಸುತ್ತಾಡಲು ಹೋಗುವುದೆಲ್ಲ ಸಾಮಾನ್ಯ. ಆದರೆ ನಿನ್ನೆ ರಾಜ್ಯದ ವಿವಿಧೆಡೆ ಕೆಲವು ಕಹಿ ಘಟನೆಗಳು ಸಂಭವಿಸಿವೆ. ಪ್ರತ್ಯೇಕ ಘಟನೆಗಳಲ್ಲಿ ಸುಮಾರು 17 ಜನರು ಪ್ರಾಣ ಸಾವಿಗೀಡಾಗಿದ್ದಾರೆ. ಘಟನೆಗಳ ವಿವರ ಇಲ್ಲಿದೆ.

ಅಪಘಾತದಲ್ಲಿ 6 ಜನ ಸಾವು: ಲಾರಿ ಮತ್ತು ಇಂಡಿಕಾ‌ ಕಾರು ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡೆಯಿತು. ಕಾರಿನ ಟೈಯರ್ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ರಾಜಪ್ಪ ಬನಗೋಡಿ (40), ರಾಘವೇಂದ್ರ ಕಾಂಬಳೆ (24), ಅಕ್ಷಯ ಶಿವಶರಣ (21), ಜಯಶ್ರೀ (26), ಮಕ್ಕಳಾದ ರಾಕಿ (4) ಹಾಗೂ ರಕ್ಷಿತಾ (2) ಮೃತರು.

ಮೃತರೆಲ್ಲರೂ ಕಾರಿನಲ್ಲಿ ವಿಜಯಪುರಿಂದ ಬೆಂಗಳೂರಿಗೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕಾರಿನ ಟೈಯರ್​ ಸ್ಫೋಟಗೊಂಡು ಇನ್ನೊಂದು ಬದಿಯ ರಸ್ತೆಗೆ ಬಂದು ಲಾರಿಗೆ ಕಾರು ಡಿಕ್ಕಿಯಾಗಿದೆ. ಲಾರಿ ವೇಗವಾಗಿ ಚಲಿಸುತ್ತಿದ್ದುದರಿಂದ ಕಾರು ಸಂಪೂರ್ಣ ವಾಹನದ ಕೆಳಗಡೆ ನುಸುಳಿದೆ. ಕಾರಿನಿಂದ ಮೃತದೇಹಗಳನ್ನು ಹೊರಗಡೆ ತೆಗೆಯಲು ಹರಸಾಹಸ ಪಡಬೇಕಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ನಾಲ್ವರು ಸ್ನೇಹಿತರು ನೀರುಪಾಲು: ನಂದಿ ಬೆಟ್ಟ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರು ನೀರು ಪಾಲಾಗಿರುವ ಘಟನೆ ಬೆಂಗಳೂರಿನ ದೇಹನಹಳ್ಳಿ ಸಮೀಪದ ರಾಮನಾಥಪುರ ಕೆರೆಯಲ್ಲಿ ರವಿವಾರ ನಡೆದಿದೆ. ಬೈಕ್​ನಲ್ಲಿ ಬಂದಿದ್ದ ಯುವಕರು ಬೆಂಗಳೂರಿಗೆ ವಾಪಸ್ ಮರಳುತ್ತಿರುವಾಗ ದಾರಿ ಮಧ್ಯೆ ಸಿಕ್ಕ ಕೆರೆಯಲ್ಲಿ ಈಜಲು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿರುವ ಶವಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಇಬ್ಬರ ಶವ ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ವಾಹನ ಗುದ್ದಿ ವ್ಯಕ್ತಿ ಸಾವು: ಸ್ಕೂಟಿ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಭಾನುವಾರ ನಡೆದಿದೆ. ಮೃತ ವ್ಯಕ್ತಿಯನ್ನು ಎರಡನೇ ಮೊಣ್ಣಂಗೇರಿ ನಿವಾಸಿ ಧನಂಜಯ್ ಎಂದು ಗುರುತಿಸಲಾಗಿದೆ. ಮಡಿಕೇರಿ ಮತ್ತು ಸಿದ್ದಾಪುರ ರಸ್ತೆಯಲ್ಲಿ ಸ್ನೇಹಿತನ ಮನೆಗೆ ಊಟಕ್ಕೆ ತೆರಳುವಾಗ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ವ್ಯಕ್ತಿ ಕೊಲೆ, ಬಾಲಕ ನೀರುಪಾಲು: ಬೆಳಗಾವಿಯ ಹೊಸೂರ ಬಸವನ ಗಲ್ಲಿಯಲ್ಲಿ ಭಾನುವಾರ ಮಧ್ಯಾಹ್ನ ಯುವಕನೊಬ್ಬನ ಬರ್ಬರ ಕೊಲೆಯಾಗಿದೆ. ಮೃತ ಯುವಕನನ್ನು ಮಿಲಿಂದ ಚಂದ್ರಕಾಂತ ಜಾಧವ (28) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನ ಕೊಲೆಯಾಗಿದ್ದು, ಆರೋಪಿ ಅಭಿಜಿತ್ ಜಾಧವ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋದ ಬಾಲಕನ ತಲೆಗೆ ಕಲ್ಲು ಬಡಿದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ದನಭಾವಿ ಕೊಳ್ಳದಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ಮಾಸ್ತಮರ್ಡಿ ಗ್ರಾಮದ ನಿವಾಸಿ ಕೃಷ್ಣ ಬಸವರಾಜ ಹಣಬರ (16) ಎಂದು ಗುರುತಿಸಲಾಗಿದೆ. ಬೈಲಹೊಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ನಾಲ್ವರು ಸಾವು: ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯ ನಗರ ವಾಟರ್ ಟ್ಯಾಂಕ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿನ ನೀರಿನ ಸಂಪ್‌ನಲ್ಲಿ ಉದ್ಯಮಿ ಪುತ್ರನ ಶವ ಮೃತ ದೇಹ ಪತ್ತೆಯಾಗಿದೆ. ಮೃತರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕೆ.ಎಂ.ಚೆರಿಯನ್ ಅವರ ಪುತ್ರ ಕ್ರಿಸ್ಟೋ ಚೆರಿಯನ್ (35) ಎಂದು ಗುರುತಿಸಲಾಗಿದೆ. ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಾಗಿದೆ.

ಮೈಸೂರು-ಬೆಂಗಳೂರು ರಸ್ತೆಯ ಕಳಸ್ತವಾಡಿ ಗೇಟ್ ಬಳಿ ಬೈಕ್ ಹಾಗೂ ಕ್ಯಾಂಟರ್​ ಡಿಕ್ಕಿ ಸಂಭವಿಸಿದ್ದು, ಯುವಕರಿಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆಯಿತು. ಮೃತರು ಕೇರಳ ಮೂಲದ ಪಿ.ಎಸ್.ನಿತಿನ್ (21), ಶಾಹಿನ್ ಶಾಜನ್ (21) ಎಂದು ಗುರುತಿಸಲಾಗಿದೆ. ಈ ಸಂಬಂಧ ಎನ್​ಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿ ಆತ್ಮಹತ್ಯೆ: ಕ್ಷುಲ್ಲಕ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರು ಪ್ರೀತಿ (27) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಜಗದೀಶ್(30)ಎಂಬ ವ್ಯಕ್ತಿ ಜೊತೆ ಮದುವೆಯಾಗಿದ್ದು, ನಾಲ್ಕು ವರ್ಷದ ಮಗುವಿದೆ. ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವು: ಮೊಬೈಲ್​ನಲ್ಲಿ ಭೀಕರ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.