ETV Bharat / state

ಅಜೀಂ ಪ್ರೇಮ್​​ಜಿ ಫೌಂಡೇಶನ್ ಹೆಸರಲ್ಲಿ 15 ಲಕ್ಷ ರೂ. ದೋಖಾ - ಅಜೀಂ ಪ್ರೇಮ್​​ಜಿ ಫೌಂಡೇಶನ್

ಪ್ರತಿಷ್ಠಿತ ಅಜೀಂ ಪ್ರೇಮ್​​ಜಿ ಫೌಂಡೇಶನ್ ಸಂಸ್ಥೆ ಹೆಸರಲ್ಲಿ ದೋಖಾ ನನಡೆದಿರುವುದು ಬೆಳಕಿಗೆ ಬಂದಿದೆ. ಕಂಪನಿಯಿಂದ ಟ್ರಸ್ಟ್​ವೊಂದಕ್ಕೆ ಧನ ಸಹಾಯ ಮಾಡುವ ಸಲುವಾಗಿ ಆರು ತಿಂಗಳಿಗೆ 66 ಲಕ್ಷ ಧನ ಸಹಾಯ ಮಾಡುವ ಬಗ್ಗೆ ಈ ಮೇಲ್ ಸಂವಾದ ನಡೆದಿತ್ತು. ಇದನ್ನೇ ಬಳಸಿಕೊಂಡು ಆರೋಪಿ ನಕಲಿ ಈ ಮೇಲ್ ಐಡಿ‌ ಕ್ರಿಯೇಟ್ ಮಾಡಿ ಸಂಸ್ಥೆಗೆ ಹಣ ಹಾಕಿಸಿಕೊಳ್ಳುವಂತೆ ನಾಟಕವಾಡಿ ತನ್ನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.

15 lakh fraud in the name of Azim Premji Foundation
ಅಜೀಂ ಪ್ರೇಮ್​​ಜಿ ಫೌಂಡೇಶನ್ ಹೆಸರಲ್ಲಿ 15 ಲಕ್ಷ ದೋಖಾ
author img

By

Published : Feb 17, 2021, 11:20 AM IST

ಬೆಂಗಳೂರ : ಪ್ರತಿಷ್ಠಿತ ಅಜೀಂ ಪ್ರೇಮ್​​ಜಿ ಫೌಂಡೇಶನ್ ಸಂಸ್ಥೆ ಹೆಸರಲ್ಲಿ ದೋಖಾ ನಡೆದದ್ದು, ತಾನು ಅಜೀಂ ಪ್ರೇಮ್​​ಜಿ ಒಡೆತನದ ಕಂಪನಿಯವನು ಎಂದು ಹೇಳಿ ಸುಮಾರು 15 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ರಿಜ್ವಿ ಎಂಬ ವ್ಯಕ್ತಿಯೇ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಆರೋಪಿ. ಕಂಪನಿಯಿಂದ ಟ್ರಸ್ಟ್​ವೊಂದಕ್ಕೆ ಧನ ಸಹಾಯ ಮಾಡುವ ಸಲುವಾಗಿ ಆರು ತಿಂಗಳಿಗೆ 66 ಲಕ್ಷ ಧನ ಸಹಾಯ ಮಾಡುವ ಬಗ್ಗೆ ಈ-ಮೇಲ್ ಸಂವಾದ ನಡೆದಿತ್ತು. ಇದನ್ನೇ ಬಳಸಿಕೊಂಡು ರಿಜ್ವಿ ಎಂಬ ವ್ಯಕ್ತಿ ಸಂಸ್ಥೆಯ ಹೆಸರು ಹೇಳಿಕೊಂಡು ತಾನು ಇಲ್ಲಿಯೇ ಕೆಲಸ ನಿರ್ವಹಿಸುವವನು ಎಂದು ಬಿಂಬಿಸಿ ನಕಲಿ ಈ-ಮೇಲ್ ಐಡಿ‌ ಕ್ರಿಯೇಟ್ ಮಾಡಿದ್ದಾನೆ.

ಓದಿ : ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದ ಮಗ

ಸಂಸ್ಥೆಗೆ ಹಣ ಹಾಕಿಸಿಕೊಳ್ಳುವಂತೆ ನಾಟಕವಾಡಿ ತನ್ನ ಖಾತೆಗೇ ಹಣ ಹಾಕಿಸಿಕೊಂಡಿದ್ದಾನೆ. ಸದ್ಯ ರಿಜ್ವಿ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಅಜೀಂ ಪ್ರೇಮ್​​ಜಿ ಸಂಸ್ಥೆ ಸರ್ಕಾರಿ ಶಾಲೆಗಳಿಗೆ ಧನ ಸಹಾಯ ಮಾಡುವ ಸಂಸ್ಥೆಯಾಗಿದ್ದು, ಇದರೊಂದಿಗೆ ಅನೇಕ ಸಂಸ್ಥೆಗಳು ಜೊತೆಗೂಡಿವೆ. ಈ ಮೂಲಕ ಸಮಾಜಕ್ಕೂ ಸೇವೆ ಸಲ್ಲಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.