ETV Bharat / state

ರಾಜ್ಯದಲ್ಲಿ ಒಟ್ಟು 14 ಮಂದಿಗೆ ಕೊರೊನಾ: ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದ ಆರೋಗ್ಯ ಸಚಿವರು - Corona Issue

ಕೊರೊನಾ ಸೋಂಕು ರಾಜ್ಯದ 14 ಮಂದಿಗೆ ತಗುಲಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

B. Shriramulu
ಕೊರೊನಾ ಬಗ್ಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದ ರಾಮುಲು
author img

By

Published : Mar 18, 2020, 8:55 PM IST

Updated : Mar 18, 2020, 9:26 PM IST

ಬೆಂಗಳೂರು: ರಾಜ್ಯದಲ್ಲಿ 14 ಮಂದಿ ಕೋವಿಡ್-19ಗೆ ತುತ್ತಾಗಿದ್ದು ರಾಜ್ಯ ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ 200 ಕೋಟಿ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದ್ದು, ಹಾಲಿ ವಿಧಿಸಿರುವ ಕಟ್ಟುನಿಟ್ಟಿನ ನಿಯಮಾವಳಿಯನ್ನು ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಸಚಿವರಾದ ಡಾ.ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು ಮತ್ತು ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ನಿತ್ಯ ಈ ಟಾಸ್ಕ್ ಫೋರ್ಸ್​ನಿಂದ ಕೊರೊನಾ ಅಪ್ಡೇಟ್ ಬುಲೆಟಿನ್​ಗಳ ಪ್ರಕಟಣೆ ನೀಡಲು ತೀರ್ಮಾನಿಸಲಾಗಿದೆ ಎಂಬ ವಿವರ ನೀಡಿದರು.

ನನ್ನ ಪುತ್ರಿಗೆ ಸಮಸ್ಯೆ ಆಗಿದೆ. ಲಂಡನ್ ಏರ್ಪೋರ್ಟ್​ನಲ್ಲಿರುವ ಹಲವರಿಗೆ ರಾಜ್ಯಕ್ಕೆ ಬರಲು ಅವಕಾಶ ನೀಡಬೇಕಿದೆ ಎಂದು ಸದಸ್ಯೆ ಜಯಮಾಲಾ ಈ ವೇಳೆ ಮನವಿ ಮಾಡಿಕೊಂಡರು. ಇದಕ್ಕೆ ಪೂರಕವಾಗಿ ಮಾತನಾಡಿದ ಬಸವರಾಜ ಹೊರಟ್ಟಿ ಮಾತನಾಡಿ, ಈ ರೀತಿ ವಿಮಾನಗಳನ್ನು ನಿರ್ಬಂಧಿಸುವುದರಿಂದ ಸಮಸ್ಯೆ ಆಗುತ್ತಿರುವವರನ್ನು ವಾಪಸ್ ಕರೆತರುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ನಂತರ ಸದಸ್ಯ ಭೋಜೇಗೌಡ ಮಾತನಾಡಿ, ಸಚಿವರು ಬಾರ್ ಮತ್ತು ರೆಸ್ಟೋರೆಂಟ್ ಏಕೆ ನಿಲ್ಲಿಸಿಲ್ಲ? ಎಂದು ಪ್ರಶ್ನಿಸಿ ವಿದೇಶದಿಂದ ಬಂದವರಿಂದ ಸಮಸ್ಯೆಯಾಗುತ್ತಿದೆ. ಈಗ ಸೋಂಕು ಮೊದಲ ಹಾಗೂ ಎರಡನೇ ಹಂತದಲ್ಲಿದೆ. ಅದು ಮೂರನೇ ಹಂತಕ್ಕೆ ಹೋದರೆ ಕಷ್ಟವಾಗಲಿದೆ ಎಂದರು.

ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ನನ್ನ ಪುತ್ರ ಕೂಡ ಪ್ಯಾರಿಸ್​ನಲ್ಲಿದಾನೆ. ಅವನ ಸ್ಥಿತಿ ಅತಂತ್ರವಾಗಿದೆ. ಎಲ್ಲರನ್ನೂ ಅಲ್ಲೇ ಉಳಿಸುವುದಕ್ಕಿಂತ ತಪಾಸಣೆಗೆ ಒಳಪಡಿಸಿ ಆರೋಗ್ಯವಾಗಿರುವವರನ್ನು ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಮರಿತಿಬ್ಬೇಗೌಡ ಮಾತನಾಡಿ, ಎಲ್ಲಾ ದೇಶದಲ್ಲಿ ಅನಿವಾಸಿ ಭಾರತೀಯ ಕಚೇರಿ ಇದೆ. ಯಾವುದೇ ರಾಷ್ಟ್ರದಲ್ಲಿ ಸಮಸ್ಯೆ ಆದರೂ ಅಲ್ಲಿನ ರಾಯಭಾರಿಗಳನ್ನು ಭೇಟಿಯಾಗಿ ಯಾವ ರೀತಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಸೂಚನೆ ನೀಡಬೇಕೆಂದು ಸಲಹೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಆರ್.ಬಿ. ತಿಮ್ಮಾಪೂರ್, ಲಂಡನ್​ನಲ್ಲಿರುವ ನನ್ನ ಮಗಳು ವಾಪಸ್ ಬಂದಿದ್ದಾಳೆ. ಅಲ್ಲಿ ಜನ ಅನುಭವಿಸುತ್ತಿರುವ ಕಷ್ಟ ಹೇಳತೀರದು. ಇವರಿಗೆ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ದಯವಿಟ್ಟು ವಿದೇಶದಲ್ಲಿರುವ ಭಾರತೀಯರಿಗೆ ರಕ್ಷಣೆ ನೀಡಬೇಕೆಂದರು.

ಕಾಂಗ್ರೆಸ್​ನ ನಾರಾಯಣಸ್ವಾಮಿ ಮಾತನಾಡಿ, ರೋಗಿಗಳ ತಪಾಸಣೆ ಸಮರ್ಪಕವಾಗಿ ಆಗುತ್ತಿಲ್ಲ. ಮೊನ್ನೆ ಒಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಬಂದಾಗ ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಕರ್ಯ ಸಿಗುತ್ತಿಲ್ಲ ಎಂದರು.

ಎಲ್ಲರ ಸಲಹೆ ಆಲಿಸಿದ ನಂತರ ಮಾತನಾಡಿದ ಸಚಿವ ಶ್ರೀರಾಮುಲು, ಪ್ರತಿಯೊಬ್ಬ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಟಲಿಯಲ್ಲಿ ಕೂಡ ಅಲ್ಲಿನ ಸರ್ಕಾರಗಳು ನಿರ್ಲಕ್ಷ್ಯ ಮಾಡಿದ್ದವು. ಅಲ್ಲಿ ಗುಂಪುಗೂಡಿದ್ದರಿಂದ ಸಮಸ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಸೋಂಕು ಎರಡನೇ ಹಂತದಲ್ಲಿದೆ. ಮುಂದಿನ ಹಂತ ತಲುಪದಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಕಡೆ ಥರ್ಮಲ್ ಸ್ಕ್ಯಾನ್​​ ಯಂತ್ರ ಅಳವಡಿಸಬೇಕು. ಕೇರಳದಿಂದ ಕರ್ನಾಟಕಕ್ಕೆ 27 ರಸ್ತೆಗಳು ಸಂಪರ್ಕ ಸಾಧಿಸುತ್ತಿವೆ. ಬಹುತೇಕ ಕಡೆ ಸ್ಕ್ರೀನಿಂಗ್, ಥರ್ಮಲ್ ಸ್ಕ್ಯಾನ್ ಮಾಡಲಾಗುತ್ತಿದೆ. ಬೆಳಗಾವಿ, ಮಹಾರಾಷ್ಟ್ರ ಗಡಿಯಲ್ಲೂ ತಪಾಸಣೆ ಮಾಡುತ್ತಿದ್ದೇವೆ. ಸಾಕಷ್ಟು ನಿಯಂತ್ರಣ ಆಗುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Last Updated : Mar 18, 2020, 9:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.