ಬೆಂಗಳೂರು: ರಾಜ್ಯದಲ್ಲಿಂದು 1,291 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,83,899ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾಗೆ ಹೊಸದಾಗಿ 15 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,765ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇಕಡಾ 1.22ರಷ್ಟು ಹಾಗೂ ಸಾವಿನ ಪ್ರಮಾಣ ಶೇಕಡಾ 1.16ರಷ್ಟಿದೆ.
ಕೊರೊನಾದಿಂದ 1,530 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 8,47,612 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 374 ಸೋಂಕಿತರು ತೀವ್ರ ನಿಗಾಘಟಕದಲ್ಲಿ ಇದ್ದು, ರಾಜ್ಯದಲ್ಲಿ ಸದ್ಯ 24,503 ಸಕ್ರಿಯ ಪ್ರಕರಣಗಳಿವೆ.
31,533 ಜನರು ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1,19,474, ದ್ವಿತೀಯ ಸಂಪರ್ಕದಲ್ಲಿ 1,33,080 ಜನರು ಇದ್ದಾರೆ. ವಿಮಾನ ನಿಲ್ದಾಣದಿಂದ 2,416 ಪ್ರಯಾಣಿಕರು ಬಂದಿದ್ದು ಕೋವಿಡ್ ತಪಾಸಣೆಗೊಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು 686 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,69,290ಕ್ಕೆ ಏರಿಕೆ ಆಗಿದೆ. 723 ಸೋಂಕಿತರು ಗುಣಮುಖರಾಗಿದ್ದು 3,46,839 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 10 ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, 4,131ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 18,319 ಇವೆ.