ಬೆಂಗಳೂರು: ಕೆಎಸ್‌ಆರ್‌ಪಿ ಇಲಾಖೆ ಸ್ಥಳೀಯ ಹಾಗೂ ಸ್ಥಳೀಯೇತರ ಒಟ್ಟು 126 ಪುರುಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ರಿಸರ್ವ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ಗಳಾಗಿ ಮುಂಬಡ್ತಿ ನೀಡಲಾಗಿದೆ.
ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಪಿ ಇಲಾಖೆಯಲ್ಲಿ ಕಾನ್ಸ್ಸ್ಟೇಬಲ್ ಹುದ್ದೆಯಲ್ಲಿ 6 ವರ್ಷ ಪೂರೈಸಿದ ಅನೇಕ ಸಿಬ್ಬಂದಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ. ಇವರಲ್ಲಿ ವಿಶೇಷವಾಗಿ ವಿಶಾಲ್ ಹೊಸಮನಿ ಎಂಬುವರು 27 ವರ್ಷ ವಯಸ್ಸಿನವರಾಗಿದ್ದು, ಇವರಿಗೆ 5 ವರ್ಷಗಳ ಸೇವೆಯಲ್ಲಿಯೇ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ.
ಓದಿ: 5ನೇ ದಿನಕ್ಕೆ ಪಂಚಮಸಾಲಿ ಹೋರಾಟ: ಸಂಜೆಯ ಮಹತ್ವದ ಸಭೆಗೆ ಯತ್ನಾಳ್ ದೌಡು, ಅಖಾಡಕ್ಕಿಳಿದ ಆನಂದ ಮಹಾಮನಿ
ಇದೇ ತಿಂಗಳ 23ರಂದು 4 ಮತ್ತು 5 ವರ್ಷಗಳ ಸೇವೆ ಪೂರೈಸಿದ ಒಟ್ಟು 72 ಮಹಿಳಾ ಪಿಸಿಗಳಿಗೆ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಈ ರೀತಿ ಕಡಿಮೆ ಅವಧಿಯಲ್ಲಿ ಸೇವೆನ್ನು ಪೂರೈಸಿದ ಕೆಎಸ್‌ಆರ್‌ಪಿ ಘಟಕದ ಪುರುಷರು ಮತ್ತು ಮಹಿಳಾ ಕಾನ್ಸ್ಟೇಬಲ್ಗಳಿಗೆ ಪದೋನ್ನತಿ ನೀಡಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ತಿಳಿದ್ದಾರೆ.