ಬೆಂಗಳೂರು: ನಗರದ ಸೋಂಕಿತರ ಪ್ರಕರಣಗಳ ಪ್ರಮಾಣ ಇಂದು ಮತ್ತೆ ಹತ್ತು ಸಾವಿರದ ಗಡಿ ಮೀರಿ ಆತಂಕದ ವಾತಾವರಣ ಸೃಷ್ಟಿಸಿದೆ. 10,231 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ ನಗರದ ಹೊರವಲಯದ 1,165 ಪ್ರಕರಣಗಳನ್ನೂ ಸೇರಿಸಿ ಒಟ್ಟು 11,396 ಜನರಿಗೆ ಸೋಂಕು ತಗುಲಿದೆ.
ಅತಿ ಹೆಚ್ಚು ಕೋವಿಡ್ ಪ್ರಕರಣ ಬೆಂಗಳೂರು ದಕ್ಷಿಣ ವಲಯದಲ್ಲಿ ವರದಿಯಾಗಿದೆ. ಒಟ್ಟು 2,117 ಜನರಲ್ಲಿ ಸೋಂಕು ದೃಢಪಟ್ಟಿದೆ. ಆರ್ಆರ್ ನಗರದಲ್ಲಿ 757, ಪಶ್ಚಿಮ ವಿಭಾಗದಲ್ಲಿ 1,479, ಬೊಮ್ಮನಹಳ್ಳಿಯಲ್ಲಿ 1,124, ದಾಸರಹಳ್ಳಿ 318, ಪೂರ್ವ ವಲಯ 1,692, ಮಹದೇವಪುರದಲ್ಲಿ 1,405, ಯಲಹಂಕ 570, ಅನೇಕಲ್ 302, ಪೂರ್ವ ತಾಲೂಕು 110, ಉತ್ತರ ತಾಲೂಕು 147, ದಕ್ಷಿಣ ತಾಲೂಕಿನಲ್ಲಿ 210 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಹಳೇ ದಾಖಲೆ ಉಡಿಸ್, 14 859 ಮಂದಿಗೆ ಸೋಂಕು
ನಗರದಲ್ಲಿ ನಿನ್ನೆ ಒಂದೇ ದಿನ 57 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿತ್ತು. 9,917 ಮಂದಿಗೆ ಸೋಂಕು ಹರಡಿತ್ತು.