ETV Bharat / state

ಕಿಸಾನ್ ಸಮ್ಮಾನ್ ಯೋಜನೆಗೆ ಬೆಂ.ಗ್ರಾಮಾಂತರದಲ್ಲಿ 10,000 ಅರ್ಜಿ ಅಪ್ಲೋಡ್ - ಪ್ರಧಾನಮಂತ್ರಿ ನರೇಂದ್ರ ಮೋದಿ

ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಗೆ ಬೆಂಗಳೂರು ಗ್ರಾಮಾಂತರದಲ್ಲಿ 10,000 ಅರ್ಜಿ ಅಪ್ಲೋಡ್ ಆಗಿದ್ದು, ಇನ್ನು ಹತ್ತು ಸಾವಿರಕ್ಕೂ ಅಧಿಕ ಅರ್ಜಿಗಳು ಅಪ್ಲೋಡ್ ಹಂತದಲ್ಲಿವೆ.

ಕಿಸಾನ್ ಸಮ್ಮಾನ್ ಯೋಜನೆ
author img

By

Published : Jun 21, 2019, 1:01 AM IST

Updated : Jun 21, 2019, 6:36 AM IST

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಲು ಇಡೀ‌ ದೇಶದಾದ್ಯಂತ ರೈತರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೂ ಈ ಯೋಜನೆಯ ಸಹಾಯ ಪಡೆಯಲು ಉತ್ಸುಕರಾಗಿದ್ದಾರೆ. ಈಗಾಗಲೇ ಈ ಯೋಜನೆಯಡಿಯಲ್ಲಿ 10 ಸಾವಿರ ಅರ್ಜಿಗಳು ತಂತ್ರಾಂಶದಲ್ಲಿ ಅಪ್ಲೋಡ್ ಆಗಿವೆ. ಅದೇ ರೀತಿ ಇನ್ನೂ ಹತ್ತು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅಪ್ಲೋಡ್ ಹಂತದಲ್ಲಿವೆ.

ಅಧಿಕಾರಿಯಿಂದ ಕಿಸಾನ್ ಸಮ್ಮಾನ್ ಯೋಜನೆ ಮಾಹಿತಿ

ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ್ದ ಆಯವ್ಯಯದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ಯೋಜನೆಯನ್ನೂ ಘೋಷಣೆ ಮಾಡಿತ್ತು. ಒಂದು ಗುಂಟೆಯಿಂದ ಆರ್​​ಟಿಸಿಗೆ ಒಳಪಡುವ ಎಲ್ಲಾ ರೈತರ ಖಾತೆಗೆ ನೇರವಾಗಿ ವರ್ಷಕ್ಕೆ 6 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಪಾವತಿಯಾಗಲಿದೆ. ಪ್ರತಿ ಕಂತಿನಲ್ಲಿ 2 ಸಾವಿರದಂತೆ ರೈತರ ಖಾತೆಗೆ ಹಣ ಬೀಳಲಿದೆ. ರೈತರು ಸಂಕಷ್ಟದಲ್ಲಿದ್ದು, ಬಡ ರೈತರು ಮತ್ತು ಫಲಾನುಭವಿಗಳಿಗೆ ಈ ಯೋಜನೆ ಸದ್ಬಳಕೆಯಾಗಬೇಕು ಅನ್ನುವ ಉದ್ದೇಶದಿಂದ ಆರ್​ಟಿಸಿ ಹೊಂದಿರುವುದಕ್ಕೆ ದಾಖಲೆಯನ್ನು ಮತ್ತು ಆಧಾರ್ ಕಾರ್ಡ್ ನೀಡಬೇಕು ಅಂತ ನಿಯಮ ರೂಪಿಸಲಾಗಿದೆ.

ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂಪಾಯಿ ಪಾವತಿಸುವ ಯೋಜನೆ ಇದಾಗಿದ್ದು, ಮೊದಲ ಕಂತಿನಲ್ಲಿ 2 ಸಾವಿರ ರೂ. ರೈತರ ಖಾತೆಗೆ ನೆರವಾಗಿ ಜಮೆಯಾಗುತ್ತದೆ.

ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯತಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿ ಪಡೆದು ಸರ್ವೆ ನಂ, ವಿಸ್ತೀರ್ಣ, ಜಾತಿ ಪ್ರಮಾಣ ಪತ್ರ, ಪಹಣಿ, ಆಧಾರ್ ಕಾರ್ಡ್ ಮತ್ತು ಭಾವಚಿತ್ರವನ್ನು ಒಳಗೊಂಡಂತೆ ಅರ್ಜಿಯನ್ನು ಭರ್ತಿ ಮಾಡಿ ನೀಡಬೇಕು. ಇದರ ಕುರಿತು ಅನುಮಾನವಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಬಳಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಈ ಯೋಜನೆಯ ಪ್ರಯೋಜನ ಪಡೆಯಲು ಈಗಾಗಲೇ ಸಾವಿರಾರು ರೈತರು ಪಂಚಾಯಿತಿ, ಕೃಷಿ ಇಲಾಖೆಗಳಿಗೆ ಮುಗಿಬಿದ್ದಿದ್ದಾರೆ. ಅಲ್ಲದೇ ಅದಕ್ಕೆ ಬೇಕಾದ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ, ನಾಡ ಕಚೇರಿಗೆ ರೈತರು ಪ್ರತಿ ನಿತ್ಯ ಅಲೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು‌ ತಾಲೂಕುಗಳಲ್ಲಿ ಸುಮಾರು‌ ಎರಡು ಲಕ್ಷಕ್ಕೂ ಹೆಚ್ಚು ರೈತರಿದ್ದು, ಈಗಾಗಲೇ ಅದರಲ್ಲಿ 10,000 ಅರ್ಜಿಗಳು ಅಪ್ಲೋಡ್ ಮಾಡಲಾಗಿದ್ದು, ಇನ್ನು ಹತ್ತು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ‌ ಸಣ್ಣ, ಅತಿ‌ಸಣ್ಣ ಮತ್ತು ದೊಡ್ಡ ರೈತರು ಸೇರಿದ್ದು, ಈ ಯೋಜನೆ ಕುರಿತು ಮಾಹಿತಿ ತಿಳಿದುಕೊಂಡಿರುವ ಎಲ್ಲಾ ರೈತರು ಯೋಜನೆ ಪ್ರಯೋಜನ ಪಡೆದುಕೊಳ್ಳಲು‌ ಮುಂದಾಗಿದ್ದಾರೆ.

ಅಂದಹಾಗೆ ಈ ಯೋಜನೆ ರೈತರಿಗೆ ಸುಲಭವಾಗಿ ತಲುಪಲು ಸರ್ಕಾರ, ಅರ್ಜಿ ಸಲ್ಲಿಸಲು ಹಲವು ಕಡೆ ಸಂಪರ್ಕ ಕೇಂದ್ರಗಳನ್ನು ತೆರೆದಿದೆ. ಆರಂಭದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಅರ್ಜಿ‌ ಸಲ್ಲಿಸಲು ಅವಕಾಶವಿತ್ತು. ಇದರಿಂದ ರೈತರು ಸರತಿ ಸಾಲಿನಲ್ಲಿ ನಿಂತು ದಿನವೆಲ್ಲಾ ಅರ್ಜಿ ಸಲ್ಲಿಸಲು ಕಾಯಬೇಕಾಗಿತ್ತು. ಆದ್ರೀಗ ಇದನ್ನು ತಪ್ಪಿಸುವ ಸಲುವಾಗಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಂಚಾಯಿತಿಗಳಲ್ಲಿ ಈ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಜುಲೈ ತಿಂಗಳವರೆಗೂ ಅವಕಾಶವಿದೆ. ಜಿಲ್ಲಾಧಿಕಾರಿಗಳು ಇದೇ ತಿಂಗಳಲ್ಲಿ ಎಲ್ಲಾ ಫಲಾನುಭವಿಗಳಿಂದ ಅರ್ಜಿ ಪಡೆದು ಅಪ್ಲೋಡ್ ಮಾಡಿ‌ ಎಂದು ಆದೇಶಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಉತ್ತಮ‌ವಾಗಿ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯನ್ನು ಪಡೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕೃಷಿ ಇಲಾಖೆಯ ಜಿಲ್ಲಾ ಉಪ‌ ನಿರ್ದೇಶಕಿ ವಿನುತ ತಿಳಿಸಿದರು.

Intro:KN_BNG_01_20_Kisan_sammar_Ambarish_7203301

Slug: ಕಿಸಾನ್ ಸಮ್ಮಾನ್ ಗೆ ಬೆಂ.ಗ್ರಾಮಾಂತರದಲ್ಲಿ ೧೦ ಸಾವಿರ ಅರ್ಜಿ ಅಪ್ಲೋಡ್, ಅಪ್ಲೋಡ್ ಹಂತದಲ್ಲಿ ೧೦ ಸಾವಿರ ಅರ್ಜಿ

ಬೆಂಗಳೂರು: ಪ್ರಧಾನಮಂತ್ರಿಗಳು ರೈತರಿಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಲು ಇಡೀ‌ ದೇಶದಾದ್ಯಂತ ರೈತರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.. ಅದೇ ರೀತಿ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ನೆರವನ್ನು ಪಡೆಯಲು ಉತ್ಸುಕರಾಗಿದ್ದು, ಈಗಾಗಲೇ ಈ ಯೋಜನೆಯಡಿಯಲ್ಲಿ ೧೦ ಸಾವಿರ ಅರ್ಜಿಗಳು ತಂತ್ರಾಂಶದಲ್ಲಿ ಅಪ್ಲೋಡ್ ಆಗಿದೆ.. ಅದೇ ರೀತಿ ಇನ್ನು ೧೦ ಸಾವಿರಕ್ಕು ಅಧಿಕ ಅರ್ಜಿಗಳು ಬಂದಿದ್ದು, ಅಪ್ಲೋಡ್ ಹಂತದಲ್ಲಿ ಇವೆ..

ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ್ದ ಆಯವ್ಯಯದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನಗ ಯೋಜನೆಯನ್ನು ಘೋಷಣೆ ಮಾಡಿತ್ತು.. ಒಂದು ಗುಂಟೆಯಿಂದ ಆರ್ಟಿಸಿ ಗೆ ಒಳಪಡುವ ಎಲ್ಲಾ ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ೬ ಸಾವಿರ ರೂಪಾಯಿ ಪಾವತಿಯಾಗಲಿದ್ದು, ಇದು ಮೂರು ಕಂತುಗಳಲ್ಲಿ ಪ್ರತಿ ಕಂತಿನಲ್ಲಿ ೨ ಸಾವಿರದಂತೆ ರೈತರ ಖಾತೆಗೆ ಹಣ ಬೀಳಲಿದೆ..

ರೈತರು ಸಂಕಷ್ಟದಲ್ಲಿದ್ದು, ಬಡ ರೈತರು ಮತ್ತು ಫಲಾನುಭವಿಗಳಿಗೆ ಈ ಯೋಜನೆ ಸದ್ಬಳಕೆಯಾಗಬೇಕು ಅನ್ನುವ ಉದ್ದೇಶದಿಂದ ಆರ್ಟಿಸಿ ಹೊಂದಿರುವುದಕ್ಕೆ ದಾಖಲೆಯನ್ನು ಮತ್ತು ಆಧಾರ್ ಕಾರ್ಡ್ ನೀಡಬೇಕು ಅನ್ನೋ ವ್ಯವಸ್ಥೆ ಜಾರಿಗೆ ಮಾಡಲಾಗಿದೆ.. ಇದರಿಂದ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ೬ ಸಾವಿರ ರೂಪಾಯಿ ಪಾವತಿಸುವ ಯೋಜನೆ ಇದಾಗಿದ್ದು, ಮೊದಲ ಕಂತಿನಲ್ಲಿ ೨ ಸಾವಿರ ರೂ.. ರೈತರ ಖಾತೆಗೆ ನೆರವಾಗಿ ಜಮರ ಮಾಡಲಾಗುತ್ತದೆ..

ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖ ಕೇಂದ್ರಗಳಿಗೆ ಬೇಟಿ ನೀಡಿ ಅರ್ಜಿ ಪಡೆದು ಸರ್ವೆ ನಂ, ವಿಸ್ತೀರ್ಣ, ಜಾತಿ ಪ್ರಮಾಣ ಪತ್ರ, ಪಹಣಿ, ಆಧಾರ್ ಕಾರ್ಡ್ ಮತ್ತು ಭಾವಚಿತ್ರವನ್ನು ಒಳಗೊಂಡಂತೆ ಅರ್ಜಿಯನ್ನು ಭರ್ತಿ ಮಾಡಿ ನೀಡಬೇಕು.. ಇದರ ಕುರಿತು ಅನುಮಾನವಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಬಳಿ ಹೆಚ್ಚಿನ ಮಾಹಿತಿ ಪಡೆಯಬಹುದು.. ಈ ಯೋಜನೆಯ ಪ್ರಯೋಜನ ಪಡೆಯಲು ಈಗಾಗಲೇ ಸಾವಿರಾರು ರೈತರು ಪಂಚಾಯಿತಿ, ಕೃಷಿ ಇಲಾಖೆಗಳಿಗೆ ಮುಗಿ ಬಿದ್ದಿದ್ದಾರೆ. ಅಲ್ಲದೇ ಅದಕ್ಕೆ ಬೇಕಾದ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ, ನಾಡ ಕಚೇರಿಗೆ ರೈತರು ಪ್ರತಿ ನಿತ್ಯ ಅಲೆಯುತ್ತಿದ್ದಾರೆ..

ಎರಡು ಲಕ್ಷಕ್ಕು ಹೆಚ್ಚು ರೈತರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು‌ ತಾಲೂಕುಗಳಲ್ಲಿ ಸುಮಾರು‌ ಎರಡು ಲಕ್ಷಕ್ಕು ಹೆಚ್ಚು ರೈತರಿದ್ದು, ಈಗಾಗಲೇ ಅದರಲ್ಲಿ ೧೦,೯೦೦ ಅರ್ಜಿಗಳು ಅಪ್ಲೋಡ್ ಮಾಡಲಾಗಿದ್ದು, ಇನ್ನು ಹತ್ತು ಸಾವಿರಕ್ಕು ಅಧಿಕ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.. ಇದರಲ್ಲಿ‌ ಸಣ್ಣ, ಅತಿ‌ಸಣ್ಣ ಮತ್ತು ದೊಡ್ಡ ರೈತರು ಸೇರಿದ್ದು, ಈ ಯೋಜನೆ ಕುರಿತು ಮಾಹಿತಿ ತಿಳಿದುಕೊಂಡಿರುವ ಎಲ್ಲಾ ರೈತರು ಯೋಜನೆ ಪ್ರಯೋಜನ ಪಡೆದುಕೊಳ್ಳಲು‌ ಮುಂದಾಗಿದ್ದಾರೆ..

ಈ ಯೋಜನೆ ರೈತರಿಗೆ ಸುಲಭವಾಗಿ ತಲುಪಲು ಸರ್ಕಾರ ರೈತರು ಅರ್ಜಿಯನ್ನು ಸಲ್ಲಿಸಲು ಹಲವು ಕಡೆ ಸಂಪರ್ಕ ಕೇಂದ್ರಗಳನ್ನು ತೆರೆದಿದೆ.. ಆರಂಭದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಅರ್ಜಿ‌ಸಲ್ಲಿಸಲು ಅವಕಾಶವಿತ್ತು.. ಇದರಿಂದ ರೈತರು ಸರತಿ ಸಾಲಿನಲ್ಲಿ ನಿಂತು ದಿನವೆಲ್ಲಾ ಅರ್ಜಿ ಸಲ್ಲಿಸಲು ಕಾಯಬೇಕಾಗಿತ್ತು.. ಇದೀಗ ಕೃಷಿ ಇಲಾಖೆ, ತೋಟಗಾರಿಕ ಇಲಾಖೆ, ಪಂಚಾಯಿತಿಗಳಲ್ಲಿ ಈ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದ್ದು, ರೈತರಿಗೆ ಸರತಿ ಸಾಲಿನಲ್ಲಿ‌ ನಿಲ್ಲುವ ಪರಿಸ್ಥಿತಿ ಇಲ್ಲ..

ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಈ ಯೋಜನೆಯನ್ನು ಫಲಾನುಭವಿ ರೈತರು ಸದ್ಬಳಕೆ ಮಾಡಿಕೊಳ್ಳಬೇಕು.. ಈ ಯೋಜನೆಯ ಪ್ರಯೋಜನ ಪಡೆಯಲು ಜುಲೈ ತಿಂಗಳವರೆಗೂ ಅವಕಾಶವಿದೆ..‌ಆದರೆ ನಮ್ಮ ಜಿಲ್ಲಾಧಿಕಾರಿಗಳು ನಮ್ಮ‌ ಜಿಲ್ಲೆಯಲ್ಲಿ ಇದೇ ತಿಂಗಳಲ್ಲಿ ಎಲ್ಲಾ ಫಲಾನುಭವಿಗಳಿಂದ ಅರ್ಜಿ ಪಡೆದು ಅಪ್ಲೋಡ್ ಮಾಡಿ‌ ಎಂದಿದ್ದಾರೆ. ಇದರಿಂದ ಎಲ್ಲಾ ಅಧಿಕಾರಿಗಳು ಉತ್ತಮ‌ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯನ್ನು ಪಡೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ.. ಅದೇ ರೀತಿ ರೈತರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕೃಷಿ ಇಲಾಖೆಯ ಜಿಲ್ಲಾ ಉಪ‌ ನಿರ್ದೇಶಕಿ ವಿನುತ ಹೇಳುತ್ತಾರೆ.

Body:NoConclusion:No
Last Updated : Jun 21, 2019, 6:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.