ಬೆಂಗಳೂರು: ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿದ್ದಂತೆಯೇ ಬೆಂಗಳೂರಿನ ಪ್ರೀಮಿಯರ್ ಶಾಪಿಂಗ್ ತಾಣ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಸಂದರ್ಶಕರಿಗೆ ಅಮೋಘ ಅನುಭವ ಒದಗಿಸುವುದಕ್ಕಾಗಿ 100 ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ಸಿದ್ಧಪಡಿಸಿದೆ.
ಇಡೀ ಟವರ್ ಸುಂದರ ಅಲಂಕಾರ ಮತ್ತು ಚಟುವಟಿಕೆಗಳ ತಾಣವಾಗಿದೆ. ಹೊಳೆಯುವ ಲೈಟ್‌ಗಳು ಮತ್ತು ಸುಂದರ ಕಲಾಕೃತಿಗಳನ್ನು ಹೊತ್ತಿರುವ ಕ್ರಿಸ್‌ಮಸ್ ಟ್ರೀ ಹಬ್ಬದ ಸೀಸನ್ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿದೆ. ಸಂಜೆಯ ಸಮಯದಲ್ಲಿ ಸಂಗೀತ ಮತ್ತು ಹಲವು ಕಲಾ ಪ್ರದರ್ಶನಗಳನ್ನು ಸಹ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಯುರೋಪಿಯನ್ ಥೀಮ್ ಇರುವ ಮಾರ್ಕೆಟ್ ಕೂಡಾ ಇದ್ದು, ಕುಟುಂಬಗಳು ಮತ್ತು ಸ್ನೇಹಿತರಿಗೆ ಅಮೋಘ ಅನುಭವ ಒದಗಿಸುತ್ತಿದೆ. ಸುಂದರ ಕಾರ್ಯಕ್ರಮಗಳು, ಸಾಂತಾ ಮೀಟ್ ಅಂಡ್ ಗ್ರೀಟ್‌ನಲ್ಲಿ ಹಬ್ಬದ ಸೀಸನ್ ಅನ್ನು ಅದ್ಭುತವನ್ನು ಅಸ್ವಾದಿಸುತ್ತಿದ್ದಾರೆ. ಕ್ಯಾರಲ್ ಗಾಯನ, ಆಕರ್ಷಕ ಸ್ನೋ ಮ್ಯಾನ್ ಮತ್ತು ಕ್ರಿಸ್‌ಮಸ್ ಪರೇಡ್ ಎಲ್ಲವನ್ನೂ ಕಣ್ಣುಂಬಿಕೊಳ್ಳಲಾಗುತ್ತಿದೆ.
ಕ್ರಿಸ್‌ಮಸ್ ಟ್ರೀ ಪಕ್ಕದಲ್ಲೇ ಒಬ್ಬ ವ್ಯಕ್ತಿಯಷ್ಟು ಎತ್ತರದ ಜಿಂಜರ್‌ಬ್ರೆಡ್ ಹೌಸ್ ಇದೆ. ಸುಂದರ ಅನುಭವ ಪಡೆಯಲು ಜನರಿಗಾಗಿ ಇದನ್ನು ತೆರೆಯಲಾಗಿದೆ. ಪೋಷಕರು ಮತ್ತು ಮಕ್ಕಳು ಈ ಮನೆಯನ್ನು ಆದರದಿಂದ ಸ್ವಾಗತಿಸುತ್ತಿದ್ದಾರೆ. ಇಲ್ಲಿ ಕಲ್ಪನೆಗಳಿಗೆ ಜೀವ ಬರುತ್ತಿದ್ದು, ಖುಷಿಯ ಅನುಭವ ಎಲ್ಲರಿಗೂ ಆವರಿಸಿಕೊಳ್ಳುತ್ತಿದೆ. ಜಿಂಜರ್‌ಬ್ರೆಡ್ ಹೌಸ್ ನಲ್ಲಿ ಸುಂದರವಾಗಿ ವಿನ್ಯಾಸ ಮಾಡಿದ ಅಲಂಕಾರಗಳು, ಸಣ್ಣ ಸಣ್ಣ ಕಿಟಕಿಗಳನ್ನು ಮಾಡಲಾಗಿದೆ. ಇದು ಅದ್ಭುತವಾದ ಕಲಾಕೃತಿಯಾಗಿ ಕಾಣಿಸುತ್ತಿದೆ.
ಕರಕುಶಲ ಉಡುಗೊರೆಗಳು, ರುಚಿಕರ ಹಬ್ಬದ ತಿನಿಸುಗಳು, ಸೀಸನಲ್ ಲೈಟ್ ಗಳನ್ನು ಸ್ಟಾಲ್‌ಗಳಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಮನರಂಜನೆ ಕಾರ್ಯಕ್ರಮವನ್ನು ಪ್ರತಿ ಸಂಜೆ ಆಯೋಜನೆ ಮಾಡಲಾಗಿದ್ದು, ಜನಪ್ರಿಯ ಕಲಾಕಾರರು ಮತ್ತು ಕ್ಯಾರಲ್ ಗಾಯಕರು ಪ್ರದರ್ಶನ ನೀಡುತ್ತಿದ್ದಾರೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಟ್ರೆಂಡಿಂಗ್ ಆಕ್ಸೆಸರಿಗಳು, ಸುಂದರ ಕಲಾಕೃತಿಗಳು, ಮನೆ ಆಲಂಕಾರಿಕ ಉತ್ಪನ್ನಗಳು ಮತ್ತು ಇತರ ಆಕರ್ಷಕ ಹಬ್ಬದ ಸಾಮಗ್ರಿಗಳು ಇದ್ದು, ಗ್ರಾಹಕರಿಗೆ ಆಯ್ಕೆಗಳ ಅಪಾರ ಅವಕಾಶವೇ ಸಿಗುತ್ತಿದೆ. ಕ್ರಿಸ್‌ಮಸ್‌ನ ಉತ್ಸಾಹ, ಖುಷಿ ಮತ್ತು ಹಬ್ಬದ ಸಂಭ್ರಮಕ್ಕೆ ಪ್ರತಿ ದಿನದ ವೇದಿಕೆಯ ಕಾರ್ಯಕ್ರಮ ನಡೆಸಲಾಗುತ್ತಿದೆ.
ಗ್ರಾಂಡ್ ಪ್ಲಾಜಾದಲ್ಲಿರುವ ವೇದಿಕೆಯು ಕ್ರಿಸ್‌ಮಸ್‌ನ ಅದ್ಭುತ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ. ಇಲ್ಲಿ ಮಕ್ಕಳು ಸಾಂತಾ ಕ್ಲಾಸ್ ಅನ್ನು ಭೇಟಿ ಮಾಡಿ ಕ್ರಿಸ್‌ಮಸ್ ವಿಶ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫೋಟೋ ಸೆಷನ್ ಕೂಡ ನಡೆಸುತ್ತಿದ್ದಾರೆ. ಮಕ್ಕಳಿಗೆ ಎಂದೆಂದಿಗೂ ನೆನಪಿರಬಹುದಾದ ಘಳಿಗೆಯನ್ನು ಇಲ್ಲಿ ಕಟ್ಟಿಕೊಡಲಾಗುತ್ತಿದೆ.
ಫೀನಿಕ್ಸ್ ಮಾಲ್ ಆಫ್ ಏಷ್ಯಾದ ದಕ್ಷಿಣ ಭಾರತದ ನಿರ್ದೇಶಕ ಗಜೇಂದ್ರ ಸಿಂಗ್ ರಾಠೋಡ್ ಮಾತನಾಡಿ, ಹಬ್ಬದ ಖುಷಿ ಮತ್ತು ಸಂಭ್ರಮಕ್ಕೆ ದ್ಯೋತಕವಾಗಿದೆ. ಅಷ್ಟೇ ಅಲ್ಲ, ಕ್ರಿಸ್‌ಮಸ್ ಮಾರ್ಕೆಟ್ ಕೂಡಾ ಇನ್ನೊಂದು ಹಂತದ ಸಂಭ್ರಮವನ್ನು ಹುಟ್ಟುಹಾಕುತ್ತಿದೆ. ಈ ವರ್ಷದ ವಿಶೇಷ ಸಮಯವನ್ನು ಸಂಭ್ರಮಿಸುವುದಕ್ಕೆ ಕುಟುಂಬಗಳು ಇಲ್ಲಿ ಒಟ್ಟಾಗಿ ಸೇರುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಅದ್ಧೂರಿಯಾಗಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಕೇಕ್ ಶೋನ ಝಲಕ್ ನೋಡಿ..