ದೊಡ್ಡಬಳ್ಳಾಪುರ : ದಿನದಿಂದ ದಿನಕ್ಕೆ ಬೈಕ್ ವೀಲ್ಹಿಂಗ್ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಟ್ರಾಫಿಕ್ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಕೂಡ ವ್ಹೀಲಿಂಗ್ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಇದೀಗ ಯಲಹಂಕ ತಾಲೂಕಿನ ಮಾರಸಂದ್ರ ಟೋಲ್ ಬಳಿ ಇಬ್ಬರು ಯುವಕರು ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದಾರೆ.
ಯಲಹಂಕ- ಹಿಂದೂಪುರ ರಸ್ತೆ ಹೊಸದಾಗಿ ಅಗಲೀಕರಣ ಮಾಡಲಾಗಿದ್ದು, ಬೆಂಗಳೂರಿನಿಂದ ಬರುವ ಪುಂಡರ ಗ್ಯಾಂಗ್ ಬೈಕ್ ವ್ಹೀಲಿಂಗ್ ಮಾಡೋದು ಇಲ್ಲಿ ಸಾಮಾನ್ಯವಾಗಿದೆ. ಮಾರಸಂದ್ರ ಟೋಲ್ ಬಳಿ ಹೆಲ್ಮೆಟ್ ಧರಿಸದೇ ಡಿಯೋ ಬೈಕ್ನಲ್ಲಿ ಪುಂಡರು ಹೀರೋಹಿಸಂ ತೋರಿಸುತ್ತಾ ಹುಚ್ಚಾಟ ಮೆರೆದಿದ್ದಾರೆ. ಇದರಿಂದ ರಸ್ತೆಯಲ್ಲಿ ಹೋಗುವ ವಾಹನ ಸವಾರರಿಗೆ ಕಿರಿಕಿರಿ ಆಗಿದ್ದು, ಸಂಚಾರಿ ಪೊಲೀಸರು ವ್ಹೀಲಿಂಗ್ಗೆ ಕಡಿವಾಣ ಹಾಕದಿದ್ದರೆ ಹೆಚ್ಚು ಅಪಘಾತ ಸಂಭವಿಸುವ ಭೀತಿ ಶುರುವಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ಪುಂಡರಿಂದ ಬೈಕ್ ವ್ಹೀಲಿಂಗ್... ವಾಹನ ಸವಾರರಿಗೆ ಹೆಚ್ಚಿದ ಎದೆಬಡಿತ