ETV Bharat / state

ಕಾಫಿ ಉದ್ಯಮದಲ್ಲಿ 1 ಕೋಟಿ ರೂ ನಷ್ಟ: ಯುವ ಉದ್ಯಮಿ ನೇಣಿಗೆ ಶರಣು

ಚಿಕ್ಕಮಗಳೂರಿನ ಮೂಡಿಗೆರೆಯಿಂದ ಕಾಣೆಯಾಗಿದ್ದ ಯುವ ಉದ್ಯಮಿಯ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬೆಂಗಳೂರಿನ ನೆಲಮಂಗಲದ ಲಾಡ್ಜ್​​ನಲ್ಲಿ ಪತ್ತೆಯಾಗಿದೆ.

Businessman suicide
ಯುವ ಉದ್ಯಮಿ ನೇಣಿಗೆ ಶರಣು
author img

By

Published : Aug 3, 2021, 9:05 AM IST

ನೆಲಮಂಗಲ: ಕಾಫಿ ಉದ್ಯಮದಲ್ಲಿ 1 ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದರಿಂದ ಮನನೊಂದು ಯುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಶಕೀರ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ನೆಲಮಂಗಲ ನಗರದ ಕುಣಿಗಲ್ ವೃತ್ತದ ವಜ್ರೇಶ್ವರಿ ಲಾಡ್ಜ್​​​ನಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ.

ಜುಲೈ 13 ರಂದು ಶಕೀರ್ ಕಾಣೆಯಾಗಿರುವುದಾಗಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜುಲೈ 29 ರಿಂದ ವಜ್ರೇಶ್ವರಿ ಲಾಡ್ಜ್​​ನಲ್ಲಿ ರೂಂ ಪಡೆದು ಶಕೀರ್ ತಂಗಿದ್ದರು. ಪ್ರತಿದಿನ ಊಟ ಕೊಡಲು ರೂಂಗೆ ಹೋಗುತ್ತಿದ್ದ ಲಾಡ್ಜ್​ ಸಿಬ್ಬಂದಿ, ನಿನ್ನೆ (ಸೋಮವಾರ) ಮಧ್ಯಾಹ್ನ ಹೋದಾಗ ಶಕೀರ್ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಪರಿಶೀಲನೆ ನಡೆಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಓದಿ: ಕಳ್ಳತನ ಮಾಡಿದ್ದ ಹಣ ಹಂಚಿಕೆಯಲ್ಲಿ ಗಲಾಟೆ: ಸ್ನೇಹಿತನ ಕೊಲೆಗೈದವರು ಅರೆಸ್ಟ್

ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.