ದೇವನಹಳ್ಳಿ: ವಿಶ್ವದ ಅತಿದೊಡ್ಡ A380 ವಿಮಾನ ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಲ್ಯಾಂಡ್ ಆಗಲಿದೆ. ಈ ಹಿಂದೆ ಘೋಷಿಸಿದ್ದಕ್ಕಿಂತ ಎರಡು ವಾರಗಳ ಮುಂಚಿತವಾಗಿಯೇ ವಿಮಾನವು ಬೆಂಗಳೂರಿಗೆ ಆಗಮಿಸುತ್ತಿದೆ.
ಎಮಿರೇಟ್ಸ್ ಏರ್‌ಲೈನ್ಸ್ ವಿಮಾನ ಸಂಸ್ಥೆಯ EK562 ವಿಮಾನ ದುಬೈನಿಂದ ಅಕ್ಟೋಬರ್ 14ರ ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಸಮಯ) ಟೇಕಾಫ್ ಆಗಲಿದ್ದು, ಅಕ್ಟೋಬರ್ 14 ರ ಮಧ್ಯಾಹ್ನ 3:40 ಕ್ಕೆ (ಸ್ಥಳೀಯ ಸಮಯ) ಬೆಂಗಳೂರಿನಲ್ಲಿ ಇಳಿಯಲಿದೆ. ಮತ್ತೆ ವಿಮಾನ ಬೆಂಗಳೂರಿನಿಂದ ಸಂಜೆ 6:40 ಕ್ಕೆ (ಸ್ಥಳೀಯ ಸಮಯ) ಹೊರಟು ರಾತ್ರಿ 9 ಗಂಟೆಗೆ (ಸ್ಥಳೀಯ ಸಮಯ) ದುಬೈ ತಲುಪಲಿದೆ.
ಈ ಹಿಂದೆಯೇ ಎಮಿರೇಟ್ಸ್ ಏರ್‌ಲೈನ್ಸ್ ಘೋಷಿಸಿದಂತೆ, ಜಂಬೋ ಜೆಟ್‌ನ ಮೊದಲ ಹಾರಾಟ ಆಕ್ಟೋಬರ್ 30 ರ ರಾತ್ರಿ 9:25ಕ್ಕೆ ದುಬೈನಿಂದ ಟೇಕಾಫ್ ಆಗಿ ಅಕ್ಟೋಬರ್ 31ರ 2:30 ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಅಕ್ಟೋಬರ್ 31 ರಂದು ಬೆಂಗಳೂರಿಗೆ ಹೋಗಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಮೊದಲೇ ಘೋಷಿಸಿತ್ತು. ಆದರೆ ಈಗ ಬದಲಾವಣೆ ಮಾಡಲಾಗಿದ್ದು, ಇಂದೇ ವಿಮಾನವು ಬೆಂಗಳೂರಿಗೆ ಬರುತ್ತಿದೆ.
ಇದನ್ನೂ ಓದಿ: ಮಾಸ್ಕೋದಿಂದ ದೆಹಲಿಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ... ರಾಷ್ಟ್ರ ರಾಜಧಾನಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್
A380 ಡಬಲ್ ಡೆಕ್ಕರ್ ವಿಮಾನವಾಗಿದ್ದು, 500 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‌ರೂಮ್ ಹೊಂದಿದೆ. ಬ್ಯೂಸಿನೆಸ್ ಕ್ಲಾಸ್ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್ನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ.