ETV Bharat / state

ವೇತನ ಹೆಚ್ಚಿಸದ ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ: ಏಕಾಏಕಿ ಖಾಸಗಿ ಕಂಪನಿ ಲಾಕ್​​ ಔಟ್​​ - protest

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್​​​​ಫ್ರಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ( MIC) ಫ್ಯಾಕ್ಟರಿಯಲ್ಲಿ  400ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳ ಮಾಡಿಲ್ಲ ಮತ್ತು ಗುತ್ತಿಗೆ ಕಾರ್ಮಿಕರಿಗೆ ಬಟ್ಟೆ, ಶೂ ಮತ್ತು ಸುರಕ್ಷತಾ ವಸ್ತುಗಳನ್ನು ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

Workers protest against private company not raising wages
ವೇತನ ಹೆಚ್ಚಿಸದ ಖಾಸಗಿ ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ
author img

By

Published : Mar 26, 2021, 9:01 PM IST

ದೊಡ್ಡಬಳ್ಳಾಪುರ (ಬೆಂ.ಗ್ರಾ): ಮೂರು ವರ್ಷಗಳಿಂದ ವೇತನ ಹೆಚ್ಚಳ ಮಾಡದ ಎಮ್​ಐಸಿ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಆಡಳಿತ ಮಂಡಳಿ ಏಕಾಏಕಿ ಲಾಕ್​​​ಔಟ್ ಮಾಡಿದೆ. ಫ್ಯಾಕ್ಟರಿಯೊಳಗೆ ಎರಡು ದಿನಗಳಿಂದ ಅನ್ನ ನೀರು ಬಿಟ್ಟು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್​​​ಫ್ರಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ (MIC) ಫ್ಯಾಕ್ಟರಿಯಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ, ಆದರೆ ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳ ಮಾಡಿಲ್ಲ ಮತ್ತು ಗುತ್ತಿಗೆ ಕಾರ್ಮಿಕರಿಗೆ ಬಟ್ಟೆ, ಶೂ ಮತ್ತು ಸುರಕ್ಷತಾ ವಸ್ತುಗಳನ್ನು ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ವೇತನ ಹೆಚ್ಚಿಸದ ಖಾಸಗಿ ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಕೊರೊನಾದಿಂದ ಕಳೆದ ವರ್ಷ ವೇತನ ಹೆಚ್ಚಿಸುವಂತೆ ಕೇಳದೆ ಸುಮ್ಮನಾಗಿದ್ದ ಕಾರ್ಮಿಕರು ಈ ವರ್ಷ ವೇತನ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ಸ್ಪಂದಿಸದ ಆಡಳಿತ ಏಕಾಏಕಿ ಕಂಪನಿ ಬಂದ್ ಮಾಡಿದೆ. ಇದರಿಂದ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕೊಳಗೇರಿ‌ ನಿವಾಸಿಗಳಿಗೆ ಸಿಹಿ ಸುದ್ದಿ: ಹಕ್ಕುಪತ್ರದ ಮೇಲಿನ ಶುಲ್ಕ ಕಡಿತಗೊಳಿಸಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.