ಆನೇಕಲ್: ಸಮಾಜ ಸ್ವಾಸ್ಥ್ಯತೆಯಿಂದ ಕೂಡಿರಲು ಹಾಗೂ ಮುಂದಿನ ಪೀಳಿಗೆಗೆ ಅದು ಮುಂದುವರೆಯಲು ಮಹಿಳೆ ಕಾರಣ. ಹೀಗಾಗಿ ಸಮಾಜದ ಕಣ್ಣು ಮಹಿಳೆಯರನ್ನ ಗೌರವದಿಂದ ನಡೆಸಿಕೊಳ್ಳಿ ಎಂದು ನಟಿ ತಾರಾ ಅನುರಾಧ ಹೇಳಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬಿಲ್ಲವ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಡನಾಡಿದ ಅವರು, ಮಕ್ಕಳಿಗೆ ಮೊಬೈಲ್ ಹುಚ್ಚು ಹಿಡಿಸದಿರಿ. ಮೊಬೈಲ್ಗಳಿಂದ ಮಕ್ಕಳು ಪಕ್ಕದಲ್ಲಿರುವ ಹಿರಿಯರ ಸಂಪರ್ಕವೇ ಕಳೆದುಕೊಂಡು ಮಾನವ ಸಹಜ ಸಂಬಂಧಗಳ ಬೆಲೆ ಕಳೆದುಕೊಳ್ಳುತ್ತಾರೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ,ಸಮಾಜ ಕಟ್ಟಲು ನಮ್ಮ ಹೆಣ್ಣು ಮಕ್ಕಳು ಕಾರಣ. ಹೀಗಾಗಿ ಹೆಣ್ಣನ್ನ ಗೌರವಿಸಬೇಕು ಎಂದರು.