ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಮನೆಯಲ್ಲಿನ ರೂಮ್ನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರದ ಕೆಂಪೇಗೌಡ ನಗರದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ತಮಿಳುನಾಡಿನ ಹೊಸೂರು ಮೂಲದ ನಂದಿನಿ (28) ನೇಣಿಗೆ ಶರಣಾಗಿದ್ದಾರೆ.
ಮೃತ ಮಹಿಳೆಗೆ 6 ವರ್ಷದ ಹಿಂದೆ ಮಾಣಿಕ್ಯ ವಾಸನ್ ಜೊತೆ ಮದುವೆಯಾಗಿತ್ತು. ಇವರ ದಾಂಪತ್ಯಕ್ಕೆ 5 ವರ್ಷದ ಹೆಣ್ಣು ಮಗು ಸಹ ಇದೆ. ಮಾಣಿಕ್ಯ ವಾಸನ್ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಾಂಬೆ ರೆಯಾನ್ ಉದ್ಯೋಗಿಯಾಗಿದ್ದರಿಂದ ನಗರದ ಕೆಂಪೇಗೌಡ ನಗರದಲ್ಲಿ ವಾಸವಾಗಿದ್ದರು.
ವಾಸನ್ ಸಾಲ ಮಾಡಿಕೊಂಡಿದ್ದರ ಹಿನ್ನೆಲೆ ಗಂಡ ಹೆಂಡತಿ ನಡುವೆ ಜಗಳವಾಗಿತ್ತು, ಇದರಿಂದ ಬೇಸತ್ತ ಹೆಂಡತಿ ಗಂಡ ಕೆಲಸಕ್ಕೆ, ಮಗಳು ಶಾಲೆಗೆ ಹೋದ ನಂತರ ರೂಮ್ ನಲ್ಲಿನ ಫ್ಯಾನ್ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಎಷ್ಟು ದುಡಿದರೂ ದುಡ್ಡು ದುಡ್ಡು ಅಂತಾಳೆ.. ಪತ್ನಿಯ ಧನದಾಹಕ್ಕೆ ಬೇಸತ್ತು ಗಂಡ ಆತ್ಮಹತ್ಯೆ