ETV Bharat / state

ಕೋವಿಡ್ 2ನೇ ಅಲೆ ಸಮರ್ಥವಾಗಿ ಎದುರಿಸುತ್ತೇವೆ: ಸಚಿವ ಸುಧಾಕರ್ - ಕೋವಿಡ್​ -19 ಕುರಿತ ಮಾರ್ಗಸೂಚಿ ಕ್ರಮ

ಮೊದಲ ಹಂತವನ್ನ ಯಶಸ್ವಿಯಾಗಿ ನಿಭಾಯಿಸಿದ್ದೇವೆ. 2ನೇ ಅಲೆ ಬರಬಹುದು ಎಂದು ಎಲ್ಲಾ ಸಿದ್ಧತೆ ‌ಕೈಗೊಂಡಿದ್ದೇವೆ. ಜನ ಸಾಧ್ಯವಾದಷ್ಟು ಬೇಗ ಲಸಿಕೆ‌ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

sudhakar
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
author img

By

Published : Mar 18, 2021, 3:22 PM IST

ಬೆಂಗಳೂರು: ಕೊರೊನಾ 2ನೇ ಅಲೆ ಮುನ್ಸೂಚನೆ ಹಿನ್ನೆಲೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಿ ಕೆಲ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ‌ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ರೋಗಿಗಳಿಗಾಗಿ ಸುಮಾರು 1000 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಮನೆಯ ಹಿರಿಯರನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ ಆಸ್ಪತ್ರೆಗೆ ಕರೆದೊಯ್ಯಲು ಸುಮಾರು 200 ಆಂಬುಲೆನ್ಸ್​ಗಳನ್ನು ಮೀಸಲಿಡಲಾಗಿದ್ದು, ಇದಕ್ಕಾಗಿ ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಅಪರ ಮುಖ್ಯ ಕಾರ್ಯದರ್ಶಿಗಳು ಸಭೆ ಮಾಡಲಿದ್ದು, ವೈದ್ಯಕೀಯ ಕಾಲೇಜಿನ ಜತೆ ಸಹ ಮಾತುಕತೆ ನಡೆಸಿ 15 ದಿನದಲ್ಲಿ ‌ಜವಾಬ್ದಾರಿ ನಿಭಾಯಿಸುವ ಅನಿವಾರ್ಯ ಎದುರಾದರೆ ಸಿದ್ಧವಾಗುವಂತೆ ‌ಮನವಿ‌ ಮಾಡಲಿದ್ದೇವೆ ಎಂದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಮೊದಲ ಹಂತವನ್ನ ಯಶಸ್ವಿಯಾಗಿ ನಿಭಾಯಿಸಿದ್ದೇವೆ. 2ನೇ ಅಲೆ ಬರಬಹುದು ಎಂದು ಎಲ್ಲಾ ಸಿದ್ಧತೆ ‌ಕೈಗೊಂಡಿದ್ದೇವೆ. ಜನ ಸಾಧ್ಯವಾದಷ್ಟು ಬೇಗ ಲಸಿಕೆ‌ ಹಾಕಿಸಿಕೊಳ್ಳಬೇಕು. ವ್ಯಾಕ್ಸಿನ್​ ಹಾಕಿಸಿಕೊಂಡ ಮಾತ್ರಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಎಲ್ಲರು ತಪ್ಪದೇ ಕೋವಿಡ್ ನಿಯಮಾವಳಿ ಅನುಸರಿಸಬೇಕು. ಸಂಪೂರ್ಣ ರೋಗ ಮುಕ್ತರಾಗುವವರೆಗೂ ಜಾಗ್ರತೆ ವಹಿಸಿ. ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡಿದೆ. ಮುಂದಿನ 50 ದಿನ ನಾನೂ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಯಾರಿಗೂ ರಜೆ ಇಲ್ಲ. ನಿರಂತರವಾಗಿ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕೂಡ ಸಭೆ ಮಾಡಲಾಗಿದೆ. ಕಂದಾಯ ಇಲಾಖೆಯವರನ್ನೂ ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಆ್ಯಪ್ ಬಳಕೆಯನ್ನು ಮುಂದುವರೆಸುತ್ತೇವೆ. ತಾಂತ್ರಿಕ ಸೌಲಭ್ಯ ಬಳಕೆ ಮಾಡಲಾಗುವುದು. ಪಾರದರ್ಶಕವಾಗಿರಲು ರಿಯಲ್ ಟೈಮ್ ಬಳಸಲಾಗುವುದು. ಲೋಪ ಕಂಡು ಬಂದ್ರೆ ಆಯಾ ಇಲಾಖೆ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದರು.

ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದ ಕಾಗಿನೆಲೆ ಶ್ರೀ

ಬೆಂಗಳೂರು ಜತೆ ಮಹಾರಾಷ್ಟ್ರ, ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಕೈಗೊಳ್ಳಬಹುದಾದ ಕ್ರಮದ ಕುರಿತು ಸಭೆ ನಡೆಸಿ ಸೂಚನೆ ನೀಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸುತ್ತೇವೆ. ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆಯಿಂದ ಯಾವುದೇ ಅನಾಹುತ ಆಗಿಲ್ಲ. ವೈಫಲ್ಯ ಕಂಡಿಲ್ಲ. ಬ್ರಿಟನ್ ಪ್ರಧಾನಿ ಸಹ ಇಲ್ಲಿನ ಲಸಿಕೆಯನ್ನೇ ಪಡೆಯುವುದಾಗಿ ತಿಳಿಸಿದ್ದಾರೆ. ಅನುಮಾನ ಬೇಡ, ಎಲ್ಲವನ್ನೂ ನಿಯಂತ್ರಿಸುತ್ತೇವೆ. ಯಾವುದೇ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಕಂಡು ಬಂದರೆ ಅಲ್ಲಿನ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.