ETV Bharat / state

ಕೊರೊನಾ ಮುಕ್ತ ದೇಶವನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದು: ಬಿ.ಶಿವಣ್ಣ - The Nizamuddin meeting

ತಾಲೂಕು ಆಡಳಿತ ಪ್ರತಿ ಮನೆಯ ಮಾಹಿತಿ ಪಡೆದು ನಿರ್ಗತಿಕರಿಗೆ ಆರೋಗ್ಯ, ಊಟದ ಜೊತೆಗೆ ಧೈರ್ಯ ತುಂಬಿ ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

We must make india Corona free country: b. Shivanna
ಭಾರತವನ್ನು ಕೊರೊನಾ ಮುಕ್ತ ದೇಶವನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು: ಬಿ. ಶಿವಣ್ಣ
author img

By

Published : Apr 3, 2020, 10:50 AM IST

ಆನೇಕಲ್​: ಆರೋಗ್ಯಯುತ ಭಾರತ ಎಲ್ಲರ ಆದ್ಯ ಕರ್ತವ್ಯ. ಈವರೆಗಿನ ಲಾಕ್‌ಡೌನ್ ವ್ಯವಸ್ಥೆಗೆ ವಲಸೆ ಕಾರ್ಮಿಕರು ಅಕ್ಷರಶಃ ಕಂಗಾಲಾಗಿದ್ದಾರೆ. ಹಸಿವಿಗಾಗಿ ಅವರು ಸ್ವಾಭಿಮಾನ ಬಿಟ್ಟು ಕೇಳಲಾರರು. ಆದ್ದರಿಂದ ತಾಲೂಕು ಆಡಳಿತ ಪ್ರತಿ ಮನೆ, ಗುಡಿಸಲುಗಳ ಮಾಹಿತಿ ಪಡೆದು ಅವರಿಗೆ ಆರೋಗ್ಯ,ಊಟದ ಜೊತೆಗೆ ಧೈರ್ಯ ತುಂಬಬೇಕು ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಕೊರೊನಾ ಮುಕ್ತ ದೇಶವನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು: ಬಿ. ಶಿವಣ್ಣ

ಒಂದು ಸಣ್ಣ ಅಸಹಕಾರ ಕಂಡು ಬಂದರೂ ನೇರವಾಗಿ ಸಿಬ್ಬಂದಿಯನ್ನು ಹೊಣೆ ಮಾಡಲಾಗುವುದು. ಯಾವುದೇ ತುರ್ತು ಸಂದರ್ಭದಲ್ಲಾಗಲೀ ಸಮಸ್ಯೆ ಬಂದಾಗ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ ಅವರನ್ನು ಕೂಡಲೇ ಸಂಪರ್ಕಿಸಿ ತಿಳಿಸಿದರು.

ಗೌರೇನಹಳ್ಳಿಯಲ್ಲಿ ಉಂಟಾಗಿರಯವ ಗೊಂದಲಕ್ಕೆ ತೆರೆ:

ದೇಹಲಿಯ ನಿಜಾಮುದ್ದೀನ್‌ಗೆ ಹೋಗಿ ಬಂದಿದ್ದರೆನ್ನಲಾದ ವ್ಯಕ್ತಿಗಳನ್ನು ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿದೆ. ಈವರೆಗೆ ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.