ETV Bharat / state

ಮನಸಲ್ಲಿರುವ ದುರಾಸೆ ಎಂಬ ವೈರಸ್ ಹೋದಾಗ ದೇಶ ಕೊರೊನಾದಿಂದ ಮುಕ್ತವಾಗ್ಬಹುದು: ವಿನಯ್ ಗೂರೂಜಿ - ಔಷಧಿ ಕಿಟ್ ವಿತರಣೆ

ನಮ್ಮ ಮನಸ್ಸಿನಲ್ಲಿರುವ  ದುರಾಸೆ ಎಂಬ ವೈರಸ್ ಹೋದಾಗ ಭಾರತ ಕೊರೊನಾದಿಂದ  ಮುಕ್ತ ಆಗ್ಬೋದು ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಹಾಗೆಯೇ ಸಂದಿಗ್ಧ ಸಂದರ್ಭದಲ್ಲಿ ಸ್ಥಿತಿವಂತರು ನಿರಾಶ್ರಿತರಿಗೆ ಆಹಾರ ಒದಗಿಸಲು ಮುಂದಾಗಬೇಕು ಎಂದ್ರು.

vinay
vinay
author img

By

Published : Jun 5, 2021, 9:21 PM IST

Updated : Jun 5, 2021, 9:33 PM IST

ದೊಡ್ಡಬಳ್ಳಾಪುರ: ನಮ್ಮ ಬೇಜವಾಬ್ದಾರಿಯಿಂದ ಕೊರೊನಾ ವೈರಸ್ ಇನ್ವೈಟ್ ಮಾಡಿದ್ದೇವೆ, ನಮ್ಮ ಮನಸ್ಸಿನಲ್ಲಿರುವ ದುರಾಸೆ ಎಂಬ ವೈರಸ್ ಹೋದಾಗ ಭಾರತ ಕೊರೊನಾದಿಂದ ಮುಕ್ತ ಆಗ್ಬೋದು ಎಂದು ವಿನಯ್ ಗುರೂಜಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನಿಂದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್​ ಮತ್ತು ಆಶಾ ಕಾರ್ಯಕರ್ತರಿಗೆ ದಿನಸಿ ಮತ್ತು ಔಷಧ ಕಿಟ್​ಗಳ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಿನಯ್ ಗೂರೂಜಿ ಸೇರಿದಂತೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವಿನಯ್ ಗೂರೂಜಿ

ಆಶಾ ಕಾರ್ಯಕರ್ತರಿಗೆ ದಿನಸಿ ಮತ್ತು ಔಷಧಗಳ ಕಿಟ್ ವಿತರಣೆ ನಂತರ ಮಾತನಾಡಿದ ವಿನಯ್ ಗುರೂಜಿ, ಈಗಾಗಲೇ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಔಷಧ ಕಿಟ್ ವಿತರಣೆ ಮಾಡಲಾಗಿದ್ದು, ಅದೇ ರೀತಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯವಾಗಲಿ ಎಂದು ಎರಡು ಉಚಿತ ಆ್ಯಂಬುಲೆನ್ಸ್, ಆಹಾರ ಸಾಮಗ್ರಿಗಳ ಕಿಟ್, ಔಷಧ ಕಿಟ್ ಹಾಗೂ 20 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ನಮ್ಮ ಬೇಜವಾಬ್ದಾರಿಯಿಂದ ಕೊರೊನಾ ವೈರಸ್ ಇನ್ವೈಟ್ ಮಾಡಿದ್ದೇವೆ, ನಮ್ಮ ಮನಸ್ಸಿನಲ್ಲಿರುವ ದುರಾಸೆ ಎಂಬ ವೈರಸ್ ಹೋದಾಗ ಭಾರತ ಕೊರೊನಾದಿಂದ ಮುಕ್ತ ಆಗ್ಬೋದು, ಸೋಂಕು ಹರಡದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ‌ ಎಂದರು. ಅಲ್ಲದೇ, ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ಥಿತಿವಂತರು ನಿರಾಶ್ರಿತರಿಗೆ ಆಹಾರ ಒದಗಿಸುವುದು ಸೇರಿದಂತೆ ಹಲವಾರು ರೀತಿಯ ಸಹಾಯ ಮಾಡಲು ಮುಂದಾಗಬೇಕು ಎಂದ್ರು.

ಪರಿಸರವನ್ನು ಈಗಾಗಲೇ ನಮ್ಮ ಸ್ವಾರ್ಥಕ್ಕಾಗಿ ನಾಶ ಮಾಡಿದ್ದೇವೆ, ಇನ್ನು ಮುಂದಾದರೂ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದ್ದು, ಅರಣ್ಯ ಪ್ರದೇಶದಲ್ಲಿರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

Last Updated : Jun 5, 2021, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.