ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಶುದ್ಧ ಕುಡಿಯುವ ನೀರಿಗಾಗಿ ಕಳೆದ 10 ವರ್ಷಗಳಿಂದ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಯಾವುದೇ ಭರವಸೆ ಸಿಕ್ಕಿಲ್ಲವಂತೆ. ಹೀಗಾಗಿ, ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಎಚ್ಚೆತ್ತ ಅಧಿಕಾರಿಗಳು ಗ್ರಾಮಗಳಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನು ಗಮನಿಸಿ, ಕೆರಳಿದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ : ಲಿಂಗಾಯತ ಸಿಎಂ ಚರ್ಚೆ ಆಗಿದೆ, ನಿರ್ಣಯ ಕೈಗೊಂಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ
ದೊಡ್ಡತುಮಕೂರು ಗ್ರಾಮದಲ್ಲಿ ಸ್ವೀಪ್ ಸಮಿತಿಯ ಅಧಿಕಾರಿಗಳು, ಅಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಜೊತೆಯಲ್ಲಿ ಮತದಾನದ ಅರಿವು ಜಾಥಾ ಮಾಡುತ್ತಿದ್ದರು. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೆವರಿಳಿಸಿದ್ದು, ಮತದಾನದ ಜಾಗೃತಿ ಕಾಯಕ್ರಮ ಕೈಬಿಟ್ಟು ಹೊರನಡೆದರು.
ಅರ್ಕಾವತಿ ನದಿ ಹೋರಾಟ ಸಮತಿ ಮುಖಂಡ ವಂಸತ್ ಮಾತನಾಡಿ, "ಸಂವಿಧಾನದಲ್ಲಿ ಮತದಾನ ಹೇಗೆ ಮೂಲಭೂತ ಹಕ್ಕು ಆಗಿದೆಯೇ, ನಮಗೆ ಶುದ್ಧ ಕುಡಿಯುವ ನೀರು ಕೇಳುವುದು ಮೂಲಭೂತ ಹಕ್ಕು. ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ತ್ಯಾಜ್ಯ ನೀರನ್ನೇ ಸೇವಿಸುತ್ತಿದ್ದೇವೆ. ಬಹಳಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿ ಮತದಾನ ಬಹಿಷ್ಕರಿಸುತ್ತಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ : ಚುನಾವಣಾ ಅಕ್ರಮ: 200 ಕೋಟಿ ಗಡಿ ದಾಟಿದ ಅಕ್ರಮ ನಗದು, ಮದ್ಯ, ಉಡುಗೊರೆ ಜಪ್ತಿ ಮೊತ್ತ
ಅರ್ಕಾವತಿ ನದಿಪಾತ್ರದಲ್ಲಿ ಬರುವ ಕೆರೆಗಳಿಗೆ ದೊಡ್ಡಬಳ್ಳಾಪುರ ತ್ಯಾಜ್ಯ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆಯ ತ್ಯಾಜ್ಯ ನೀರು ಸೇರಿ ನೇರವಾಗಿ ಸೇರುತ್ತಿದೆ. ಇದರಿಂದ ಕುಡಿಯುವ ನೀರು ವಿಷವಾಗಿದೆ. ಲ್ಯಾಬ್ನಲ್ಲಿ ಬಂದ ವರದಿಯಲ್ಲಿ ಅಂತರ್ಜಲದ ನೀರಿನಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಬಳಕೆಗೂ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಗ್ರಾಮಗಳಿಗೆ ಶುದ್ಧ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರು ನೇರವಾಗಿ ಕೆರೆ ಸೇರದಂತೆ ಕ್ರಮ ತೆಗೆದುಕೊಳ್ಳುವಂತೆ ಕಳೆದ ಹತ್ತು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದನ್ನೂ ಓದಿ : ಪೊಲೀಸರು ತಡೆಯುತ್ತಿಲ್ಲವೆಂದು ಸಂಚಾರ ರಸ್ತೆ ನಿಯಮ ಉಲ್ಲಂಘಿಸಿದ್ರೆ ಜೋಕೆ! ಐಟಿಎಂಎಸ್ ಮೂಲಕ ಬೀಳುತ್ತೆ ದಂಡ