ETV Bharat / state

ಬೆಂಗಳೂರು ಗ್ರಾಮಾಂತರ ವಿದ್ಯಾರ್ಥಿಗಳ ಗಮನ ಸೆಳೆದ ವಿದ್ಯಾಗಮ ಯೋಜನೆ

author img

By

Published : Aug 21, 2020, 8:07 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಹ ವಿದ್ಯಾಗಮ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಐ ಗಂಗಮಾರೇಗೌಡ, ದೊಡ್ಡಬಳ್ಳಾಪುರ ತಾಲೂಕು ಬಿಇಓ ಬಯ್ಯಾಪ್ಪ ರೆಡ್ಡಿ ವಿದ್ಯಾಗಮ ಯೋಜನೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳ ಗಮನ ಸೆಳೆದ ವಿದ್ಯಾಗಮ ಯೋಜನೆ
ವಿದ್ಯಾರ್ಥಿಗಳ ಗಮನ ಸೆಳೆದ ವಿದ್ಯಾಗಮ ಯೋಜನೆ

ಬೆಂಗಳೂರು : ಈಗಾಗಲೇ ಶಾಲೆ ಶುರುವಾಗಿ ಮೂರು ತಿಂಗಳಾಗಬೇಕಿತ್ತು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡ ಪರಿಣಾಮ ಶಾಲೆಗಳ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಶಾಲೆಗಳು ಶುರುವಾಗದೆ ತರಗತಿಗಳು ಇಲ್ಲದೆ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗುತ್ತಿದ್ದಾರೆ. ಆದರೆ ಮಕ್ಕಳು ಮತ್ತು ಶಿಕ್ಷಕರ ಮಧ್ಯೆ ಸೇತುವೆಯಾಗಿ ವಿದ್ಯಾಗಮ ಯೋಜನೆ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನ ಸೆಳೆದಿದೆ.

ವಿದ್ಯಾರ್ಥಿಗಳ ಗಮನ ಸೆಳೆದ ವಿದ್ಯಾಗಮ ಯೋಜನೆ

ಕೊರೊನಾ ಭೀತಿಯ ನಡುವೆ ವಿದ್ಯಾರ್ಥಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ವಿದ್ಯಾರ್ಥಿಗಳು ಇರುವ ಸ್ಥಳಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಲಿದ್ದಾರೆ. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ಗ್ರಾಮದ ದೇವಸ್ಥಾನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಸ್ಥಳದಲ್ಲಿ ತರಗತಿ ನಡೆಸಲಿದ್ದಾರೆ.

ವಿದ್ಯಾರ್ಥಿಗಳ ಬಳಿ ಇರುವ ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಲಾಗಿದೆ. ಟೈಪ್-1 ನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು, ಟೈಪ್-2 ಬೇಸಿಕ್ ಸೆಟ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಟೈಪ್-3 ಸ್ಮಾರ್ಟ್ ಫೋನ್ ಹೊಂದಿರುವ ವಿದ್ಯಾರ್ಥಿಗಳು. ಯಾವುದೇ ರೀತಿಯ ಮೊಬೈಲ್ ಸೌಲಭ್ಯ ಇಲ್ಲದ ಟೈಪ್-1 ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರೇ ಮನೆಗೆ ಬಂದು ಪಾಠ ಮಾಡಲಿದ್ದಾರೆ, ಟೈಪ್-2 ನಲ್ಲಿ ಬೇಸಿಕ್ ಸೆಟ್ ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿಗೆ ಫೋನ್ ಕರೆ ಮಾಡಿ ಬೋಧಿಸಲಾಗುವುದು. ಸ್ಮಾರ್ಟ್ ಫೋನ್ ಹೊಂದಿರುವ ಟೈಪ್-3 ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಪಾಠ ಮಾಡಲಾಗುತ್ತದೆ. ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಇಲ್ಲಿ ಶಿಕ್ಷಕರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದ್ದರೆ ವಿದ್ಯಾರ್ಥಿಗಳ ಮನೆಗೆ ಬರುವ ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಹ ವಿದ್ಯಾಗಮ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಐ ಗಂಗಮಾರೇಗೌಡ, ದೊಡ್ಡಬಳ್ಳಾಪುರ ತಾಲೂಕು ಬಿಇಓ ಬಯ್ಯಾಪ್ಪ ರೆಡ್ಡಿ ವಿದ್ಯಾಗಮ ಯೋಜನೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.