ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಪೊರಕೆ ಕಡ್ಡಿ ಕೊಯ್ಯುತ್ತಿದ್ದ ಒಂಟಿಯಾಗಿ ಸಿಕ್ಕ ವೃದ್ಧೆಗೆ ದುಷ್ಕರ್ಮಿಯೊಬ್ಬ ಚಾಕು ತೋರಿಸಿ ಬೆದರಿಸಿ, ಆಕೆಯ ಚಿನ್ನದ ತಾಳಿ, ಕಿವಿಯೋಲೆ, ಗುಂಡು ಮತ್ತು ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 6 ರ ಬೆಳಗ್ಗೆ 10.30 ಸಮಯದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಹನುಮಕ್ಕ ಎಂಬುವರು ಪೊರಕೆ ಕಡ್ಡಿಯನ್ನು ಕೊಯ್ಯಲು ಹೋದಾಗ, ಬೈಕ್ನಲ್ಲಿ ಬಂದ ದುಷ್ಕರ್ಮಿ ಸಂಬಂಧಿಕ ಎಂದು ಹೇಳಿಕೊಂಡು ಆಕೆಯನ್ನು ಮಾತನಾಡಿಸಿದ್ದಾನೆ. ಬಳಿಕ ಚಾಕು ತೋರಿಸಿ ಬೆದರಿಸಿ ಆಕೆಯ ಬಳಿ ಇದ್ದ ಚಿನ್ನದ ಕಿವಿಯೋಲೆ, ಗುಂಡು, ತಾಳಿ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಆಟೋ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ : ಲೇಡಿ PSI ವಿರುದ್ಧ ಸಾರ್ವಜನಿಕರು ಗರಂ
ಘಟನೆಯಾದ ದಿನವೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ, ಪೊಲೀಸರು ಎಫ್ಐಆರ್ ದಾಖಲು ಮಾಡಿಲ್ಲ. ಕಳ್ಳನನ್ನ ಹಿಡಿಯುವುದಾಗಿ ಹೇಳುತ್ತಾರೆ ಹೊರತು, ಘಟನೆ ನಡೆದು 13 ದಿನವಾದ್ರೂ ಎಫ್ ಐಆರ್ ಮಾತ್ರ ದಾಖಲು ಮಾಡಿಲ್ಲ ಎಂದು ಅಜ್ಜಿ ಅಳಲು ತೋಡಿಕೊಂಡಿದ್ದಾರೆ.