ದೇವನಹಳ್ಳಿ(ಬೆಂ.ಗ್ರಾಮಾಂತರ): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಗಾಂಜಾ ಕಳ್ಳಸಾಗಾಣಿಕೆ ಮಾಡಲೆ ತ್ನಿಸಿದ ಇಬ್ಬರು ಸ್ಮಗ್ಲರ್ಗಳನ್ನು ಮಾದಕದ್ರವ್ಯ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳ ಮೂಲದ ಅಂತಾರಾಷ್ಟ್ರೀಯ ಸ್ಮಗ್ಲರ್ಗಳಾದ ಇವರು ದೇವನಹಳ್ಳಿಯ ಕೆಐಎಎಲ್ನಿಂದ ದುಬೈಗೆ ಗಾಂಜಾ ಕಳ್ಳಸಾಗಾಣಿಕೆ ಮಾಡುವ ವಿಫಲ ಯತ್ನದಲ್ಲಿ ನಡೆಸಿದ್ದಾರೆ.
ಬಂಧಿತರಿಂದ 8.4 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.