ETV Bharat / state

ಮಚ್ಚಿನಿಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ! - attack on bank employee from sword,

ದುಷ್ಕರ್ಮಿಯೊಬ್ಬ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗ್ರಾಮಸ್ಥರಿಂದ ಗೂಸಾ ತಿಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

attack on bank employee, attack on bank employee from sword, attack on bank employee in Doddaballapura, Doddaballapura bank employee attack news, Doddaballapura bank employee attack, ಬ್ಯಾಂಕ್​ ಸಿಬ್ಬಂದಿ ಮೇಲೆ ದಾಳಿ, ಕತ್ತಿಯಿಂದ ಬ್ಯಾಂಕ್​ ಸಿಬ್ಬಂದಿ ಮೇಲೆ ದಾಳಿ, ದೊಡ್ಡಬಳ್ಳಾಪುರದಲ್ಲಿ ಬ್ಯಾಂಕ್​ ಸಿಬ್ಬಂದಿ ಮೇಲೆ ದಾಳಿ, ದೊಡ್ಡಬಳ್ಳಾಪುರ ಬ್ಯಾಂಕ್​ ಸಿಬ್ಬಂದಿ ದಾಳಿ, ದೊಡ್ಡಬಳ್ಳಾಪುರ ಬ್ಯಾಂಕ್​ ಸಿಬ್ಬಂದಿ ದಾಳಿ ಸುದ್ದಿ,
ಮಚ್ಚಿನಿಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ
author img

By

Published : Dec 2, 2019, 3:50 PM IST

ದೊಡ್ಡಬಳ್ಳಾಪುರ : ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗ್ರಾಮಸ್ಥರ ಕೈಯಲ್ಲಿ ಒದೆ ತಿಂದಿರುವ ಘಟನೆ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ.

ಮಚ್ಚಿನಿಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಗ್ರಾಮದ ಕಾರ್ಪೊರೇಷನ್ ಬ್ಯಾಂಕ್​ ಸಿಬ್ಬಂದಿ ಮೇಲೆ ದುರ್ಗೇನಹಳ್ಳಿ ಗ್ರಾಮದ ಕುಮಾರ್(32) ಮಚ್ಚಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಅದರೆ ಬ್ಯಾಂಕ್ ಸಿಬ್ಬಂದಿ ತಪ್ಪಿಸಿಕೊಂಡಿದ್ದಾರೆ. ಹಲ್ಲೆಗೆ ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಬಳಿಕ ಗುಂಪಾಗಿ ಸೇರಿದ ಗ್ರಾಮಸ್ಥರು ಕುಮಾರ್​ನನ್ನು ರಸ್ತೆಯಲ್ಲೇ ಅಟ್ಟಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನು ಕುಮಾರ್​ ಬ್ಯಾಂಕ್​ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ಮಚ್ಚಿನಿಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಕ್ಷಣಾರ್ಧದಲ್ಲಿ ಬಚಾವ್ ಆದ ಸಿಬ್ಬಂದಿ ಗ್ರಾಮಸ್ಥರಿಂದ ಗೂಸಾ ತಿಂದ ಹಲ್ಲೆಗೆ ಯತ್ನಿಸಿದವ
Body:ದೊಡ್ಡಬಳ್ಳಾಪುರ : ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಅದರೆ ಹಲ್ಲೆಯಿಂದ ಬ್ಯಾಂಕ್ ಸಿಬ್ಬಂದಿ ಬಚಾವ್ ಆದ ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದವನಿಗೆ ಸರಿಯಾಗಿಯೇ ಗೂಸಾ ನೀಡಿದ್ದಾರೆ. ಹಲ್ಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಘಟನೆ ನಡೆದಿದ್ದು. ಪಕ್ಕದ ದುರ್ಗೇನಹಳ್ಳಿ ಗ್ರಾಮದ ಕುಮಾರ್ (32) ಕೈಯಲ್ಲಿ ಮಚ್ಚನ್ನು ಹಿಡಿದು ಬ್ಯಾಂಕ್ ಸಿಬ್ಫಂದಿಯ ಮೇಲೆ ಹಲ್ಲೆಗೆ ಯತ್ನಿಸಿದ. ಅದರೆ ಬ್ಯಾಂಕ್ ಸಿಬ್ಬಂದಿಯ ಮುಂಭಾಗದಲ್ಲಿನ ಗಾಜು ಸಿಬ್ಬಂದಿಯನ್ನ ಹಲ್ಲೆಯಿಂದ ಪಾರು ಮಾಡಿದೆ. ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ರಸ್ತೆಯಲ್ಲೆ ಅಟ್ಟಾಡಿಸಿ ಹಿಗ್ಗಾಮುಗ್ಗ ಬಾರಿಸಿದ್ದಾರೆ ಗ್ರಾಮಸ್ಥರು.
ಹಲ್ಲೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.