ಹೊಸಕೋಟೆ(ಬೆಂ.ಗ್ರಾಮಾಂತರ): ಫಾಸ್ಟ್ ಟ್ಯಾಗ್ ಕಡ್ಡಾಯ ಹಿನ್ನೆಲೆ, ಹೊಸಕೋಟೆ ಟೋಲ್ನಲ್ಲಿ ಸರ್ಕಾರದ ನಿಯಮದಂತೆ ಮಧ್ಯರಾತ್ರಿಯಿಂದ ಟ್ಯಾಗ್ ಹಾಕಿಕೊಳ್ಳದೆ ಇರುವ ವಾಹನಗಳಿಗೆ ನಿನ್ನೆ ಇದ್ದ ಶುಲ್ಕಗಿಂತ ಇಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಖಾಸಗಿ ಬಸ್ ನಿರ್ವಾಹಕ ಮತ್ತು ಟೋಲ್ ಸಿಬ್ಬಂದಿ ನಡುವೆ ಗಲಾಟೆ ನಡೆಯಿತು. ಫಾಸ್ಟ್ಟ್ಯಾಗ್ ಹಾಕಿಕೊಳ್ಳದೆ ಬಂದಿದ್ದು, ಹೆಚ್ಚು ಶುಲ್ಕವನ್ನು ಕೇಳಿದಾಗ ನಿರ್ವಾಹಕ ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಉಂಟಾಯಿತು. ಇದರಿಂದ ಬಸ್ ಹಿಂದೆ ಇದ್ದ ಹತ್ತಾರು ವಾಹನಗಳಿಗೆ ಸಾಲಿನಲ್ಲಿ ಕಾಯುವಂತೆ ಆಯ್ತು.
ಜೀಪ್ ಮತ್ತು ಗಾಡಿಗಳಿಗೆ 40 ರೂ. ಮಿನಿ ಬಸ್ ಮತ್ತು ದೊಡ್ಡ ವಾಹನಗಳಿಗೆ 60 ರೂ. ಮತ್ತು ಟ್ರಕ್ ಮತ್ತು ಬಸ್ಸುಗಳಿಗೆ 130 ರೂ. ಸ್ವೀಕರಿಸುತ್ತಿದ್ದು, ಇದಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೊಸಕೋಟೆ ಟೋಲ್ನಲ್ಲಿ ನೂರಾರು ವಾಹನಗಳಿಗೆ ಫಾಸ್ಟ್ಟ್ಯಾಗ್ ಹಾಕಿಕೊಳ್ಳದೇ ಹಣ ಪಾವತಿ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಟೋಲ್ನಲ್ಲಿ ನೋಟಿಸ್ ಹಾಕಿದರೂ ವಾಹನ ಮಾಲೀಕರು ಫಾಸ್ಟ್ಸ್ಟಾಗ್ ಮಾಡಿಸಿಕೊಳ್ಳದೆ ಇಂದು ಟೋಲ್ ಸಿಬ್ಬಂದಿ ಜೊತೆ ಗಲಾಟೆ ಮಾಡುತ್ತಿದ್ದಾರೆ.