ETV Bharat / state

ಆನೇಕಲ್ ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧಿಸಿದ ಪೊಲೀಸರು

author img

By

Published : Nov 12, 2021, 8:14 AM IST

ಜೋಡಿ ಕೊಲೆ ಆರೋಪಿಗಳ ಪತ್ತೆಯಾಗಿ ಆನೇಕಲ್ ಉಪವಿಭಾಗದ ಡಿವೈಎಸ್​​​ಪಿ ಮಲ್ಲೇಶ್ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Three arrested in case of Anekal Double murder case
ಆನೇಕಲ್ ಜೋಡಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧಿಸಿದ ಪೊಲೀಸರು

ಆನೇಕಲ್ (ಬೆಂ.ಗ್ರಾ): ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಳ್ಳೂರಿನ ಟಿವಿಎಸ್ ರಸ್ತೆ ಸಮೀಪ ಕಳೆದ ತಿಂಗಳು 21 ರಂದು ನಡೆದಿದ್ದ ಜೋಡಿಕೊಲೆ ಪ್ರಕರಣ (Anekal Double murder)ದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಆರೋಪಿಗಳಾದ ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿ ವಾಸಿ ಲಕ್ಷ್ಮಿ ನಾರಾಯಣ, ರಾಚಮನಹಳ್ಳಿ ವಾಸಿ ಸುಮನ್ ಸೇರಿ ಮೂವರು ಆರೋಪಿಗಳ ಬಂಧಿಸಿ ಪರಪ್ಪನ ಅಗ್ರಹಾರ (Parappana Agrahara) ಜೈಲಿಗೆ ಕಳುಹಿಸಲಾಗಿದೆ.

ಅಕ್ಟೋಬರ್ 24ರಂದು ಕೊರಮಂಗಲ ಮೂಲದ ಅತ್ತಿಬೆಲೆ ನಿವಾಸಿ ದೀಪಕ್ ಕುಮಾರ್ ಮತ್ತು ಮಾಯಸಂದ್ರ ವಾಸಿ ದೊರೆ ಭಾಸ್ಕರ್ ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ 20 ದಿನಗಳಲ್ಲಿ ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೂವರು ಆರೋಪಿಗಳ ಬಂಧಿಸಿದ ಪೊಲೀಸರು

ದೊರೆ ಭಾಸ್ಕರ್​ಗೆ ಫೈನಾನ್ಸ್ ನೀಡಿದ್ದ ತಮಿಳುನಾಡಿನ ಬೇಗೆನಹಳ್ಳಿ ವಾಸಿ ಅರುಣ್ ಕುಮಾರ್ ಎ1 ಆರೋಪಿಯಾಗಿದ್ದಾನೆ. ಜೋಡಿ ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್​​​ಪಿ ಮಲ್ಲೇಶ್ (Anekal DYSP Mallesh) ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು.

ಪ್ರಕರಣ ಬೆನ್ನಟ್ಟಿದ ಪೊಲೀಸರು ಫೈನಾನ್ಸ್ ಮಾಡುತ್ತಿದ್ದ ಅರುಣ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಹೊರಬಿದ್ದಿದೆ. ಕೊಲೆಯಾದ ದೊರೆ ಭಾಸ್ಕರ್, ಆರೋಪಿ ಅರುಣ್ ಕುಮಾರ್ ಬಳಿ 15 ಸಾವಿರ ಸಾಲ ಪಡೆದುಕೊಂಡಿದ್ದ, ಆದರೆ, ಸಾಲ ವಾಪಸ್ ಹಿಂತಿರುಗಿಸುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

ಸಂದಾನಕ್ಕಾಗಿ ದೊರೆ ಭಾಸ್ಕರ್ ಮತ್ತು ಸ್ನೇಹಿತ ದೀಪಕ್ ಕುಮಾರ್​​​ನನ್ನು ಅರುಣ್ ಕುಮಾರ್ ಕರೆಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು, ಮದ್ಯದ ಬಾಟಲಿ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ: VIDEO; ಮೂರು ಕರುಗಳಿಗೆ ಜನ್ಮ ನೀಡಿದ ದೇಸಿ ಹಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.