ETV Bharat / state

ಮೀನಿನ ಬಾಕ್ಸ್​ನಲ್ಲಿಟ್ಟು ಗಾಂಜಾ ಮಾರಾಟ: ನೆಲಮಂಗಲದಲ್ಲಿ ಮಾಜಿ ಸೈನಿಕನ ಮಗ ಸೇರಿ ಮೂವರು ಅರೆಸ್ಟ್​

author img

By

Published : Jul 4, 2021, 2:28 PM IST

ಒಡಿಶಾದಿಂದ ಸರಬರಾಜಾಗುತ್ತಿದ್ದ ಗಾಂಜಾವನ್ನು ಮೀನಿನ ಬಾಕ್ಸ್​ನಲ್ಲಿಟ್ಟು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Marijuana selling in Bengaluru
ಗಾಂಜಾ ಮಾರಾಟಗಾರರ ಬಂಧನ

ನೆಲಮಂಗಲ : ಮೀನು ಸಾಗಣೆ ಮಾಡುವ ಥರ್ಮಾಕೋಲ್ ಬಾಕ್ಸ್​ನಲ್ಲಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸರು, 11 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒಡಿಶಾ ಮೂಲದ ದಿವಾಕರ್, ಬೆಂಗಳೂರಿನ ಸುದರ್ಶನ್ ಹಾಗೂ ವಿಶ್ವನಾಥ್ ಬಂಧಿತರು. ಆರೋಪಿ ದಿವಾಕರ್ ಮಾಜಿ ಸೈನಿಕನ ಪುತ್ರನಾಗಿದ್ದು, ಈತ ಒಡಿಶಾದ ಮಲ್ಕನರಿ ಬೆಟ್ಟದಲ್ಲಿ ಬೆಳೆಯುವ ಗಾಂಜಾವನ್ನು ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

ದಿವಾಕರನಿಂದ ಗಾಂಜಾ ಪಡೆಯುತ್ತಿದ್ದ ಸುದರ್ಶನ್ ಮತ್ತು ವಿಶ್ವನಾಥ್ ಬೆಂಗಳೂರಿನ ವಿವಿಧ ಕಾಲೇಜು, ಕಾರ್ಖಾನೆಗಳ ಬಳಿ ಯುವಕರಿಗೆ ಮಾರಾಟ ಮಾಡುತ್ತಿದ್ದರು.

ಓದಿ : Honeytrapಗೆ ಸಿಲುಕಿ 30 ಲಕ್ಷ ರೂ. ಕಳೆದುಕೊಂಡ ಯುವಕ: ಪುತ್ತೂರಲ್ಲಿ ಮಾಯಾಂಗಿನಿ ಅರೆಸ್ಟ್​

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ಮೌಲ್ಯದ 11 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.