ಚಿಕ್ಕಬಳ್ಳಾಪುರ: ಎರನೇ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಚುನಾವಣಾ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ.ಸದ್ಯ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶ ಕಲ್ಪಿಸುವುದಾಗಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ಹೌದು, ನಾಳೆ ನಂದಿ ಬೆಟ್ಟಕ್ಕೆ ಪ್ರಯಾಣ ಬೆಳಸಿದರೆ ಖಂಡಿತವಾಗಿಯೂ ಮತದಾನವನ್ನು ಮಾಡಿರಲೇಬೇಕು ಇಲ್ಲವಾದರೆ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಿಲ್ಲ. ಮತದಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ನಿರ್ಣಯವನ್ನು ತಗೆದುಕೊಂಡಿದೆ. ಈಗಾಗಲೇ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ,ಬೈಕ್ ರ್ಯಾಲಿ,ಸಾಂಸ್ಕೃತಿಕ ಕಾರ್ಯಕ್ರಮಗಳು,ಗಾಳಿಪಟ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾನದ ಅರಿವು ಮೂಡಿಸಲಾಗಿದೆ.
ನಾಳೆ ಮತ ಚಲಾಯಿಸಿದವರು ಮಾತ್ರವೇ ನಂದಿ ಬೆಟ್ಟಕ್ಕೆ ಪ್ರವೇಶಿಸಬಹುದು ಎಂದು ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಅಧಿಸೂಚನೆ ಹೊರಡಿಸಿದ್ದಾರೆ. ಒಂದು ವೇಳೆ ನೀವೇನಾದ್ರು ರಜೆಯ ಮಜವನ್ನು ಕಳೆಯಲು ನಂದಿ ಬೆಟ್ಟಕ್ಕೆ ಪ್ರವಾಸ ಪ್ಲಾನ್ ಮಾಡಿದ್ದರೆ ಮತವನ್ನು ಚಲಾಯಿಸದರೆ ಮಾತ್ರವೇ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯ..!