ನೆಲಮಂಗಲ: ಐಷಾರಾಮಿ ಜೀವನಕ್ಕಾಗಿ ಕಾರು ಕದಿಯುತ್ತಿದ್ದ ಕುಖ್ಯಾತ ಮೂವರು ಕಾರುಗಳ್ಳರನ್ನು ಬಂಧಿಸುವಲ್ಲಿ ದಾಬಸ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಂದಾಸ್ ಜೀವನ ನಡೆಸುವುದಕ್ಕೆ ಯುವಕರು ಕಾರು ಕದ್ದಿಯುತ್ತಿದ್ದು, ಕದ್ದ ಕಾರುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ನೆಲಮಂಗಲ ತಾಲೂಕಿನ ಹಲವು ಕಡೆ ಕಾರುಗಳನ್ನು ಕದ್ದು ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ. ಕಾರು ಕಳುವಾಗುತ್ತಿರುವ ಪ್ರಕರಣ ಬೆನ್ನತ್ತಿದ್ದ ನೆಲಮಂಗಲ ಪೊಲೀಸರು ಕಾರುಗಳ್ಳರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಮೊಬೈಲ್ ಟವರ್ ಆಧಾರದ ಮೇಲೆ ಕುಖ್ಯಾತ ಮೂವರು ಕಾರುಗಳ್ಳರನ್ನ ಬಂಧಿಸುವಲ್ಲಿ ದಾಬಸ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡು ಮೂಲದ ನೂರ್ ಮೊಹ್ಮದ್( 38) ಸಾಬೀರ್ ಮೊಹ್ಮದ್ ಸಲಾಂ( 32) ಹಾಗೂ ಮೊಹ್ಮದ್ ಪಾಸೀಲ್ (26) ಬಂಧಿತರು.
ಕಾರುಗಳ್ಳರಿಂದ 15 ಲಕ್ಷಕ್ಕೂ ಅಧಿಕ ಮೌಲ್ಯದ ಕಾರುಗಳನ್ನ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಜತೆಗೆ ಆರೋಪಿಗಳ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.