ETV Bharat / state

ಭಯೋತ್ಪಾದಕ ಜ್ಯೋತಿಷಿಗಳಿಂದ ಎಚ್ಚರಿಕೆಯಿಂದಿರಿ: ಚಂದ್ರ ಗ್ರಹಣದ ಬಗ್ಗೆ ಹುಲಿಕಲ್ ನಟರಾಜ್ - etv bharat karnataka

ಗ್ರಹಣಗಳು ಮನುಷ್ಯನ ಮೇಲೆ ಯಾವುದೇ ರೀತಿಯ ಪರಿಣಾಮ ಬಿರೋದಿಲ್ಲ ಆದರೆ ಭಯೋತ್ಪಾದಕ ಕೆಲವು ಜ್ಯೋತಿಷಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ, ಇಂತಹ ಡೊಂಗಿ ಜ್ಯೋತಿಷಿಗಳಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಸಲಹೆ.

Hulikal Nataraj
ಹುಲಿಕಲ್ ನಟರಾಜ್
author img

By

Published : Nov 8, 2022, 10:52 AM IST

Updated : Nov 8, 2022, 12:39 PM IST

ದೊಡ್ಡಬಳ್ಳಾಪುರ: ಗ್ರಹಣಗಳು ಮನುಷ್ಯನ ಮೇಲೆ ಯಾವುದೇ ರೀತಿಯ ಪರಿಣಾಮ ಬಿರೋದಿಲ್ಲ. ಆದರೆ ಕೆಲವು ಭಯೋತ್ಪಾದಕ ಜ್ಯೋತಿಷಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ಡೋಂಗಿ ಜ್ಯೋತಿಷಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಚಿಂತಕ ಹುಲಿಕಲ್ ನಟರಾಜ್ ಹೇಳಿದರು.

ಗ್ರಹಣಗಳ ಕುರಿತು ಜನರಲ್ಲಿ ತಪ್ಪು ತಿಳುವಳಿಕೆ: ಗ್ರಹಣದ ಸಮಯದಲ್ಲಿ ಮನೆಯಿಂದ ಹೊರ ಬರಬಾರದು, ಆಹಾರ ಸೇವಿಸಬಾರದು, ದಾನ ಕೊಡಬೇಕು ಎಂಬೆಲ್ಲ ನಿಯಮಗಳು ಅವೈಜ್ಞಾನಿಕ. ಈ ಮೂಢ ನಂಬಿಕೆಗಳಿಂದ ಜನರು ಹೊರಬರಬೇಕು ಎಂದು ಅವರು ಸಲಹೆ ನೀಡಿದರು.

ಭೂಮಿ ಹುಟ್ಟಿದಾಗಿನಿಂದ ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಚಲನೆಯಲ್ಲಿವೆ. ಚಲನೆ ಇಲ್ಲದೇ ಇದ್ದರೆ ಈ ಜಗತ್ತೇ ಸರ್ವನಾಶವಾಗುತ್ತೆ. ಚಲನೆಯ ಕಾರಣದಿಂದ ಗ್ರಹಣಗಳು ಸಂಭವಿಸುತ್ತವೆ. ಹಿಂದಿನಿಂದಲೂ ಸಾಕಷ್ಟು ಗ್ರಹಣಗಳಾಗಿವೆ. ಆಗಲೂ ಸಹ ಕೆಲವು ಡೋಂಗಿ ಜ್ಯೋತಿಷಿಗಳು ಭಯೋತ್ಪಾದಕ ಹೇಳಿಕೆ ನೀಡಿ ಜನರಲ್ಲಿ ಗ್ರಹಣದ ಬಗ್ಗೆ ಭಯದ ವಾತಾವರಣ ಸೃಷ್ಠಿಸಿದ್ದರು. ಇಂದು ಮಾಧ್ಯಮ ಪ್ರಭಾವ ಹೆಚ್ಚಿದ್ದು ಜ್ಯೋತಿಷಿಗಳು ಸುಲಭವಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಗ್ರಹಣ ಸಮಯದಲ್ಲಿ ಉಪವಾಸ ಇರಬೇಕು. ಮನೆಯಲ್ಲಿರುವ ಆಹಾರ, ನೀರನ್ನು ಹೊರ ಚೆಲ್ಲಬೇಕು ಎಂದು ಹೇಳುವ ಜ್ಯೋತಿಷಿಗಳ ಹೇಳಿಕೆಯನ್ನು ಖಂಡಿಸಿ ಮಾತನಾಡಿದ ಹುಲಿಕಲ್ ನಟರಾಜ್, ಮನೆಯಲ್ಲಿರುವ ಆಹಾರ, ನೀರನ್ನು ಹೊರಗೆ ಹಾಕುವ ನೀವು ಪ್ರಕೃತಿಯ ಬಯಲಲ್ಲಿರುವ ನೀರು ಮತ್ತು ಆಹಾರವನ್ನು ಎಲ್ಲಿಗೆ ಹಾಕುವಿರಿ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಇಂದು ಚಂದ್ರಗ್ರಹಣ, ಬಹುತೇಕ ದೇಗುಲಗಳು ಬಂದ್​: ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ತೊಂದರೆ

Last Updated : Nov 8, 2022, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.