ETV Bharat / state

ಬೆಂಗಳೂರು: ಪಿಜಿ ಹುಡುಕುತ್ತಿದ್ದ ಯುವಕನ ಮೊಬೈಲ್​ ಎಗರಿಸಿದ ಖದೀಮರ ಬಂಧನ

ಯುವಕನ ಮೊಬೈಲ್​ ಎಗರಿಸಿದ ಖದೀಮರು- ಇಬ್ಬರು ಆರೋಪಿಗಳು ಅಂದರ್​- ಯಲಹಂಕದ ವಿನಾಯಕ ನಗರದ ಎನ್​.ಆರ್​ ರೆಸಿಡೆನ್ಸಿ ಬಳಿ ಘಟನೆ

author img

By

Published : Feb 1, 2023, 1:59 PM IST

mobile phone
ಮೊಬೈಲ್​ ಎಗರಿಸಿದ ಖದೀಮರ ಬಂಧನ

ಯಲಹಂಕ(ಬೆಂ.ಗ್ರಾ): ವಿದ್ಯಾರ್ಥಿಯೊಬ್ಬ ಹೊಸದಾಗಿ ಪಿಜಿ ಹುಡುಕುತ್ತಾ ಮೊಬೈಲ್​ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಹಿಂದಿನಿಂದ ಬಂದ ಖದೀಮರು 1 ಲಕ್ಷ ಮೌಲ್ಯದ ಐಫೋನ್​ ಎಗರಿಸಿ ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್​ಗಳು ಸೇರಿದಂತೆ ಮೂರು ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಯಲಹಂಕ ರಮಣಶ್ರೀ ಕ್ಯಾಲಿಫೋರ್ನಿಯಾ ರೆಸಾರ್ಟ್​ ಹಿಂಭಾಗದ ನಿವಾಸಿ ನಿಕೀತಾ ರಾಜೇಶ್​ ಹೊಸದಾಗಿ ಪಿಜಿ ಹುಡುಕುತ್ತಿದ್ದರು. ಜನವರಿ 21ರಂದು ಯಲಹಂಕದ ವಿನಾಯಕ ನಗರದ ಎನ್​ ಆರ್​ ರೆಸಿಡೆನ್ಸಿ ಬಳಿ ಪಿಜಿ ಹುಡುಕುತ್ತಾ, ಮೊಬೈಲ್​ನಲ್ಲಿ ಮಾತನಾಡುತ್ತಾ ನಡೆದಾಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತರು ಸುಮಾರು 1.10 ಲಕ್ಷ ಮೌಲ್ಯದ ಐಫೋನ್​ ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಇದನ್ನೂ ಓದಿ: ಸಿಗರೇಟ್ ನೀಡದ ಕಾರಣಕ್ಕೆ ಪಾನ್​ಶಾಪ್​ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ- ಕಣ್ಣಿನ ದೃಷ್ಟಿ ಕಳೆದುಕೊಂಡ ಮಾಲೀಕ

ತನಿಖೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ಬೆಂಗಳೂರಿನ ಕಬ್ಬನ್​ ಪೇಟೆ ನಿವಾಸಿಗಳಾದ ಅತೋಣಿ ಡಿ ಸಿಲ್ವ(25) ಮತ್ತು ನಾರಾಯಣ್​(23) ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಖದೀಮರು ಮೊಬೈಲ್​ ಮತ್ತು ಬೈಕ್​ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಗಳಿಂದ ಸುಲಿಗೆ ಮಾಡಲಾಗಿದ್ದ ಒಂದು ಐಫೋನ್​, ಎರಡು ಓಪೋ ಮೊಬೈಲ್​ಗಳು, ಒಂದು ವಿವೋ ಮೊಬೈಲ್​ ಸೇರಿದಂತೆ ಕರಟಿಎಂ ಡ್ಯೂಕ್​ ಬೈಕ್​, ಬಜಾಬ್​ ಪಲ್ಸರ್​, ಹೋಂಡಾ ಆಕ್ಟೀವಾ ಸ್ಕೂಟರ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಡ್ಯದಲ್ಲಿ ಮನೆಗಳ್ಳನ ಬಂಧನ: ಸಾಕಷ್ಟು ಮನೆಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಖದೀಮನನ್ನು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದ ಮಹಮ್ಮದ್ ರಫೀಕ್ ಎಂಬುವವನು ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ, ಆಟೋ, 4 ಬೈಕ್ ವಶ ಪಡಿಸಿಕೊಳ್ಳಲಾಗಿದೆ.

ಅಸ್ಸೋಂ ಮೂಲದ ಇಬ್ಬರ ಬಂಧನ: ನಕಲಿ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಅಸ್ಸೋಂ ರಾಜ್ಯದ ನಿವಾಸಿಗಳಾಗಿದ್ದಾರೆ. ಕೋಲ್ಕತ್ತಾ ಪೊಲೀಸ್​ ಇಲಾಖೆಯ ವಿಶೇಷ ತನಿಖಾ ದಳದ ಪೊಲೀಸರು ಧರ್ಮತಾಲಾ ವೃತ್ತದಲ್ಲಿ ಸೋಮವಾರ ರಾತ್ರಿ 10 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಶೇಖರ್ ಅಲಿ ಮತ್ತು ಅಬ್ದುಲ್ ರಜಾಕ್ ಖಾನ್ ಎಂದು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.