ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯ ಸಂತೋಷ್ ಜ್ಯುವೆಲರ್ಸ್ ಅಂಗಡಿಯಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದ್ದು, ಖದೀಮರು 650 ಗ್ರಾಂ ಚಿನ್ನಾಭರಣ, 7 ಕೆ ಜಿ ಬೆಳ್ಳಿ ಕದ್ದೊಯ್ದಿದ್ದಾರೆ.
ತೂಬಗೆರೆಯ ಖಾನರಾಮ್ ಎಂಬುವರಿಗೆ ಸೇರಿದ ಜ್ಯುವೆಲರ್ಸ್ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಕಳ್ಳರು ಮೊದಲು ವಿದ್ಯುತ್ ಕನೆಕ್ಷನ್ ತೆಗೆದು, ಸಿಸಿಟಿವಿಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಅಂಗಡಿಯ ಹಿಂಭಾಗದ ಗೋಡೆಯನ್ನು ಕೊರೆದು ಒಳಗೆ ನುಗ್ಗಿದ್ದಾರೆ. ಸುಮಾರು 7 ಕೆ.ಜಿ ಬೆಳ್ಳಿ, 650 ಗ್ರಾಂ ಚಿನ್ನವನ್ನು ಕದ್ದಿದ್ದಾರೆ. ಅಷ್ಟೇ ಅಲ್ಲದೆ, ಚಿನ್ನ ಬೆಳ್ಳಿ ಒಡವೆಗಳನ್ನು ಜೋಡಿಸಿಟ್ಟಿದ್ದ ಖಾಲಿ ಬಾಕ್ಸ್ ಗಳನ್ನು ಬಾರ್ ಪಕ್ಕದಲ್ಲಿರುವ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.
ಸದ್ಯ ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.