ಆನೇಕಲ್: ಜೀರ್ಣೋದ್ಧಾರಗೊಂಡಿದ್ದ ದೇವಾಲಯಕ್ಕೆ ನುಗ್ಗಿದ ಕಳ್ಳರಿಬ್ಬರು ದೇವರ ಮುಂದೆ ಇಟ್ಟಿದ್ದ ಎರಡು ಹುಂಡಿಗಳನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ಸರ್ಜಾಪುರ - ಅತ್ತಿಬೆಲೆ ರಸ್ತೆಯ ಪಕ್ಕದಲ್ಲಿರುವ ದೇವಾಲಯಕ್ಕೆ ನುಗ್ಗಿ ಹುಂಡಿಗಳನ್ನು ದೋಚಿ ಪರಾರಿಯಾಗುತ್ತಿರುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.