ETV Bharat / state

ಪರೇಡ್ ಎಫೆಕ್ಟ್ : ಆಲೂಗಡ್ಡೆ ತುಂಬಿದ ಟ್ರ್ಯಾಕ್ಟರ್​ಗೂ ಸಿಗಲಿಲ್ಲ ಬೆಂಗಳೂರು ಪ್ರವೇಶಕ್ಕೆ ಅನುಮತಿ

author img

By

Published : Jan 26, 2021, 12:18 PM IST

ರಾಜ್ಯ ರಾಜಧಾನಿಯಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್ ಹಿನ್ನೆಲೆ, ಆಲೂಗಡ್ಡೆ ತುಂಬಿದ್ದ ಟ್ರ್ಯಾಕ್ಟರ್​ಅನ್ನು ತಡೆದು ವಾಪಸ್ ಕಳಿಸಿರುವ ಘಟನೆ ಹೊಸಕೋಟೆ ಟೋಲ್​ ಬಳಿ ನಡೆದಿದೆ.

potatoes
ಎಫೆಕ್ಟ್

ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ಆಲೂಗಡ್ಡೆ ತುಂಬಿದ್ದ ಟ್ರ್ಯಾಕ್ಟರ್​ಅನ್ನು ತಡೆದು, ವಾಪಸ್ ಕಳಿಸಿರುವ ಘಟನೆ ಹೊಸಕೋಟೆ ಟೋಲ್​ ಬಳಿ ನಡೆದಿದೆ.

ಆಲೂಗಡ್ಡೆ ತುಂಬಿದ ವಾಹನ ವಾಪಸ್ ಕಳಿಸಿದ ಪೊಲೀಸ್

ರೈತ ಮುನಿರಾಮಪ್ಪ 80 ಮೂಟೆ ಆಲೂಗಡ್ಡೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ವಾಹನ ತಡೆದ ಪೊಲೀಸರ ಬಳಿ ರೈತರು ಟ್ರ್ಯಾಕ್ಟರ್ ಬಿಡುವಂತೆ ಬೇಡಿಕೊಂಡರೂ, ವಾಪಸ್​ ಹೋಗುವಂತೆ ಸೂಚಿಸಿದ್ದರು. ಬಳಿಕ ಕೆಲಕಾಲ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ:ರೈತರ ಪರೇಡ್​​ಗೆ ಮಂಗಳಮುಖಿಯರ ಸಾಥ್​: 300ಕ್ಕೂ ಹೆಚ್ಚು ರೈತರಿಗೆ ತಿಂಡಿ ವ್ಯವಸ್ಥೆ

ಬಳಿಕ ಇದೇ ಮಾರ್ಗದಲ್ಲಿ ಬಂದ ವಿದ್ಯುತ್ ಕಂಬ ತುಂಬಿದ ಟ್ರ್ಯಾಕ್ಟರ್​ಅನ್ನೂ ಪೊಲೀಸರು ವಾಪಸ್ ಕಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.