ನೆಲಮಂಗಲ: ಪ್ರತಿನಿತ್ಯ ಜಗಳಕ್ಕೆ ಬರುತ್ತಿದ್ದನೆಂದು ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಂಬ ಕಾರಣಕ್ಕೆ ವ್ಯಕ್ತಿವೋರ್ವನನ್ನು ಕೊಂದಿರುವ ಘಟನೆಬೆಂಗಳೂರು ಉತ್ತರ ತಾಲೂಕು ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ.
ಲಕ್ಷ್ಮಣ (58) ಕೊಲೆಯಾಗಿಡಾಗಿರುವ ವ್ಯಕ್ತಿ. ಶಂಕರ್ ಕೊಲೆಗೈದ ಆರೋಪಿಯಾಗಿದ್ದು, ಘಟನೆ ನಂತರ ಪರಾರಿಯಾಗಿದ್ದಾನೆ. ಕೊಲೆಯಾದ ಲಕ್ಷ್ಮಣ್ ಪ್ರತಿನಿತ್ಯ ಕಾಲು ಕೆರ್ಕೊಂಡ್ ಶಂಕರ್ ಮೇಲೆ ಜಗಳಕ್ಕೆ ಬರುತ್ತಿದ್ದ. ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಇದರಿಂದ ಕೋಪಗೊಂಡಿದ್ದ ಶಂಕರ್ ಆತನ ಎದೆಗೆ ಒದ್ದು, ಕೆನ್ನೆಗೆ ಬಾರಿಸಿದ್ದಾನೆ. ಶಂಕರ್ ಹೊಡೆತಕ್ಕೆ ಸ್ಥಳದಲ್ಲಿಯೇ ಕುಸಿದುಬಿದ್ದು ಲಕ್ಷ್ಮಣ್ ಪ್ರಾಣಬಿಟ್ಟಿದ್ದಾನೆ.
ಕೊಲೆ ಬಳಿಕ ಎಸ್ಕೇಪ್ ಆಗಿರುವ ಆರೋಪಿ ಶಂಕರ್ ಪತ್ತೆಗೆ ಮಾದನಾಯಕನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.