ಆನೇಕಲ್: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿದೆ ಎನ್ನಲಾದ ಕಲ್ಯಾಣ ಮಂಟಪದ ಜಾಗಕ್ಕೆ ತಹಶೀಲ್ದಾರ್ ಸಿ. ಮಹದೇವಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಆನೇಕಲ್ ತಾಲೂಕಿನ ಸುರಜಕ್ಕನಹಳ್ಳಿ ಬಳಿಯ ಗ್ರಾಮದ ಸರ್ವೇ ನಂ 5, 6, 7 ರಲ್ಲಿ ಅಕ್ರಮ ಕಲ್ಯಾಣ ಮಂಟಪ ನಿರ್ಮಿಸುತ್ತಿರುವ ಜಾಗವಾಗಿದ್ದು, ಸಾರ್ವಜನಿಕರು ನೀಡಿದ ದೂರಿನನ್ವಯ ಸ್ಥಳಕ್ಕೆ ತಾಲೂಕು ಆಡಳಿತ ಆಗಮಿಸಿತ್ತು. ಆನೇಕಲ್ನಿಂದ ಇಂಡ್ಲವಾಡಿಗೆ ಹೋಗುವ ರಸ್ತೆಯಲ್ಲಿರುವ ಕಲ್ಯಾಣ ಮಂಟಪದ ಜಾಗ ಸರ್ವೇ ನಂಬರ್ ಸರ್ಕಾರಕ್ಕೆ ಸೇರುತ್ತದೆ. ಅದರಲ್ಲಿ ಹೊನ್ನಕಳಾಶಪುರ ಎಂಬಾ ಗ್ರಾಮಕ್ಕೆ ಸಾಗುವ, ಸಾರ್ವಜನಿಕ ರಸ್ತೆ ನಿರ್ಮಾಣವಾಗಬೇಕಿತ್ತು. ಇದೀಗ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಲಾಗಿದೆ.
ಹಳ್ಳಿಯೊಂದಕ್ಕೆ ಸಾಗುವ ರಸ್ತೆಯಲ್ಲಿ ಭೂ ಕಬಳಿಕೆ ಆರೋಪ ಕೇಳಿಬರುತ್ತಿದ್ದು, ಸದ್ಯ ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಲು ದಂಡಾಧಿಕಾರಿ ಸೂಚನೆ ನೀಡಿದ್ದಾರೆ. ಸರ್ಕಾರದಿಂದ ಸರ್ವೆ ಆಗುವ ವರೆಗೂ ಕೆಲಸ, ಕಾಮಗಾರಿ ನಡೆಯದಂತೆ ಎಚ್ಚರಿಸಿದ್ದಾರೆ.