ETV Bharat / state

ಗ್ರಾ.ಪಂ ಬಿಲ್​ ಕಲೆಕ್ಟರ್​ನಿಂದ ಕೋಟ್ಯಂತರ ರೂ ತೆರಿಗೆ ಹಣ ವಂಚನೆ ಆರೋಪ: ದೂರು ದಾಖಲು - Kannamangala Gram Panchayat

2020-21ನೇ ಸಾಲಿನಲ್ಲಿ ಬಡಾವಣೆಗಳು, ಅಪಾರ್ಟ್ಮೆಂಟ್​ಗಳು ಸೇರಿದಂತೆ ಇನ್ನಿತರೆ ಕಡೆಯಿಂದ ತೆರಿಗೆ ವಸೂಲಿ ಮಾಡಿದ್ದ ಹಣವನ್ನ ಸರ್ಕಾರದ ಖಜಾನೆಗೆ ಕಟ್ಟದೆ ವಂಚನೆ ಮಾಡಿದ ಆರೋಪದ ಮೇರೆಗೆ ಬಿಲ್​ ಕಲೆಕ್ಟರ್​ ವಿರುದ್ಧ ಪಿಡಿಒ ಆದರ್ಶ್ ಎಂಬುವರು ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

tax money cheating case
ಕನ್ನಮಂಗಲ ಗ್ರಾಮ ಪಂಚಾಯತ್​
author img

By

Published : Nov 28, 2022, 2:19 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಕನ್ನಮಂಗಲ ಗ್ರಾಮ ಪಂಚಾಯತ್​ಗೆ ವಾರ್ಷಿಕ ತೆರಿಗೆ ಹಣವೇ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಹೀಗೆ ಪಂಚಾಯತ್​ಗೆ ಬಂದ ಹಣವನ್ನು ಬಿಲ್ ​ಕಲೆಕ್ಟರ್​ವೊಬ್ಬರು​ ನುಂಗಿ ನೀರು ಕುಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಕನ್ನಮಂಗಲ ಪಂಚಾಯತ್​ಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ಹಣ ಬರುತ್ತದೆ. ವರ್ಷಕ್ಕೆ ಐದರಿಂದ 8 ಕೋಟಿ ರೂ. ಹಣ ವಸೂಲಿ ಆಗುತ್ತದೆ. ಆದ್ರೆ ತೆರಿಗೆ ವಸೂಲಿ ಮಾಡೋ ಬಿಲ್​ ಕಲೆಕ್ಟರ್​ ಮಂಜುನಾಥ್​ ಎಂಬಾತ ಐದು ಕೋಟಿ 75 ಲಕ್ಷ ಹಣವನ್ನು ಗುಳುಂ ಮಾಡಿರೋ ಆರೋಪ ಕೇಳಿ ಬಂದಿದೆ. 2020-21ನೇ ಸಾಲಿನಲ್ಲಿ ಬಡಾವಣೆಗಳು, ಅಪಾರ್ಟ್ಮೆಂಟ್​ಗಳು ಸೇರಿದಂತೆ ಇನ್ನಿತರೆ ಕಡೆಯಿಂದ ತೆರಿಗೆ ವಸೂಲಿ ಮಾಡಿದ್ದ ಹಣವನ್ನ ಸರ್ಕಾರದ ಖಜಾನೆಗೆ ಕಟ್ಟದೆ ವಂಚನೆ ಮಾಡಿದ್ದಾನೆ ಎನ್ನಲಾಗಿದ್ದು, ಬಿಲ್​ ಕಲೆಕ್ಟರ್​ ವಿರುದ್ಧ ಪಿಡಿಒ ಆದರ್ಶ್ ಎಂಬುವರು ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ತೆರಿಗೆ ಹಣ ವಂಚನೆ ಕುರಿತು ಮಾಹಿತಿ ನೀಡಿದ ಕನ್ನಮಂಗಲ ಗ್ರಾಪಂ​ ಅಧ್ಯಕ್ಷ ಲಕ್ಷ್ಮೀ ಕಾಂತ್

ಇದನ್ನೂ ಓದಿ: ಕ್ಯಾಸಿನೋ ಆಡಲು ಗೋವಾಕ್ಕೆ ಕರೆದೊಯ್ದು ಮೋಸ ಆರೋಪ.. ವೀರೇಂದ್ರ ವಿರುದ್ಧ ಎಫ್​ಐಆರ್​

ಅಂದಹಾಗೆ, 2020-21ನೇ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಆಡಳಿತ ಪಂಚಾಯತಿಯಲ್ಲಿರಲಿಲ್ಲ. ಈ ವೇಳೆ ತಾಲೂಕು ಪಂಚಾಯತ್​ ಅಧಿಕಾರಿಗಳೇ ಪಂಚಾಯತಿಯ ಆಡಾಳಿತಾಧಿಕಾರಿಯಾಗಿದ್ದರು. ಪಂಚಾಯತ್​ನ 11 ಹಳ್ಳಿಗಳ ಬಡಾವಣೆ, ಮನೆಗಳು, ಲೇಔಟ್​ಗಳಿಂದ ತೆರಿಗೆ ವಸೂಲಿಯನ್ನು ಬಿಲ್​ ಕಲೆಕ್ಟರ್​ ಮಾಡಿದ್ದನಂತೆ. ಅಂದು ತೆರಿಗೆಯನ್ನು ವಸೂಲಿ ಮಾಡಿದ್ದ ಬಿಲ್​ ಕಲೆಕ್ಟರ್​ ಮಂಜುನಾಥ್,​ ಸುಮಾರು 7 ತೆರಿಗೆ ವಸೂಲಿ ಬುಕ್​ಗಳನ್ನೇ ನೀಡಿಲ್ಲವಂತೆ. ಮೊನ್ನೆಯಷ್ಟೇ ಪಂಚಾಯತ್​ಗೆ ಹೊಸ ಅಧ್ಯಕ್ಷರು ಲಕ್ಷ್ಮೀಕಾಂತ ನೇಮಕವಾದಾಗ ಪಂಚಾಯತ್​ ಆಡಿಟಿಂಗ್​ಗೆ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ತೆರಿಗೆ ವಸೂಲಾತಿ 7 ಬುಕ್​ಗಳನ್ನ ಪಡೆದಿದ್ದ ಬಿಲ್​ ಕಲೆಕ್ಟರ್​ ವಾಪಸ್​ ನೀಡಿಲ್ಲ ಅನ್ನೋದು ಗೊತ್ತಾಗಿದೆ. ಅದರ ಲೆಕ್ಕವಾಗಿ ಆಡಿಟಿಂಗ್​ ಮಾಡಿದಾಗ ಬರೊಬ್ಬರಿ ಐದು ಕೋಟಿ ತೆರಿಗೆ ವಸೂಲಿ ಹಣ ವಂಚಿಸಲಾಗಿದೆ ಎಂದು ಪಿಡಿಒ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಸಾಲ‌ ಕೊಡಿಸುವುದಾಗಿ ಪಂಗನಾಮ: ಮನೆ ಜಪ್ತಿಯ ಬ್ಯಾಂಕ್​ ನೋಟಿಸ್​ನಿಂದ ವಂಚನೆ ಬೆಳಕಿಗೆ

ಇನ್ನು ದೂರು ದಾಖಲಾಗುತ್ತಿದ್ದಂತೆ 7 ಬುಕ್​ಗಳನ್ನು ತಾಲೂಕು ಪಂಚಾಯತ್​ಗೆ ಬಿಲ್​ ಕಲೆಕ್ಟರ್​ ಹಾಜರುಪಡಿಸಿರೋದು ಗೊತ್ತಾಗಿದೆ. ಜತೆಗೆ ಈ ಹಿಂದೆಯೂ ಇದೇ ಪಂಚಾಯತ್​ನಲ್ಲಿ ಕಂಪ್ಯೂಟರ್​ ಆಪರೇಟರ್​ವೊಬ್ಬರು ತೆರಿಗೆ ಬುಕ್​ಗಳಲ್ಲಿ ಮಹಾವಂಚನೆ ಮಾಡಿ 9 ಲಕ್ಷ ಹಣ ಗುಳುಂ ಮಾಡಿದ್ದರು. ಇದೀಗ ಮತ್ತೆ ಪಂಚಾಯತ್​ನಲ್ಲಿ ಕೋಟಿ ಕೋಟಿ ತೆರಿಗೆ ಹಣ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಅಧ್ಯಕ್ಷರಾಗಿರೋ ಲಕ್ಷ್ಮೀಕಾಂತ್ ಪಾರದರ್ಶಕವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.